Header Ads
Header Ads
Breaking News

ಬೈಕ್‌ಗಳಿಗೆ ಢಿಕ್ಕಿಯಾಗಿ ಗ್ಯಾರೇಜೊಂದಕ್ಕೆ ನುಗ್ಗಿದ ಕಾರು. ಬೈಕ್ ಸವಾರರು ಸಣ್ಣಪುಟ್ಟ ಗಾಯದೊಂದಿಗೆ ಪಾರು

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಢಿಕ್ಕಿ ಹೊಡೆದು ಬಳಿಕ ಗ್ಯಾರೇಜೊಂದಕ್ಕೆ ನುಗ್ಗಿದ ಘಟನೆ ಪಡುಬಿದ್ರೆಯ ಕಲ್ಸಂಕ ಎಂಬಲ್ಲಿ ನಡೆದಿದೆ.ಕಲ್ಸಂಕದ ಬಳಿ ಕಾರೊಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

  ಅಪಘಾತದ ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿರುವ ಗ್ಯಾರೇಜೊಂದಕ್ಕೆ ನುಗ್ಗಿದೆ. ಅಪಘಾತದ ಸುದ್ದಿ ಕೇಳಿ ಗ್ಯಾರೇಜಿನ ಸಿಬ್ಬಂದಿ ಹೊರಗೋಡಿದ್ದರಿಂದ ಸಂಭಾವ್ಯ ಅಪಾಯದಿಂದ ಅವರು ಪಾರಾಗಿದ್ದಾರೆ. ಘಟನೆಯಲ್ಲಿ ಗ್ಯಾರೇಜಿನಲ್ಲಿ ನಿಲ್ಲಿಸಿದ್ದ ಎರಡು ಬೈಕ್‌ಗಳು ಸಂಪೂರ್ಣ ಜಖಂಗೊಂಡಿದೆ.

Related posts

Leave a Reply