Header Ads
Header Ads
Breaking News

ಬೈಕ್, ಆಕ್ಟೀವಾ ಹಾಗೂ ಓಮ್ನಿ ಕಾರಿನ ನಡುವೆ ಸರಣಿ ಅಪಘಾತ : ವಿಟ್ಲ ಸಮೀಪದ ಮಾಣಿಯಲ್ಲಿ ನಡೆದ ಘಟನೆ

ವಿಟ್ಲ: ಬೈಕ್, ಆಕ್ಟೀವಾ ಹಾಗೂ ಓಮ್ನಿ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿ ಬೈಕ್ ಸವಾರ ಹಾಗೂ ಓಮ್ನಿ ಚಾಲಕ ಗಾಯಗೊಂಡ ಘಟನೆ ವಿಟ್ಲ ಸಮೀಪದ ಮಾಣಿಯಲ್ಲಿ ಸಂಭವಿಸಿದೆ. ಪುತ್ತೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್‌ನ ಸವಾರ ಎದುರಿನಿಂದ ಮಹಿಳೆಯೊಬ್ಬರು ಚಲಾಯಿಸಿಕೊಂಡು ಹೋಗುತ್ತಿದ್ದ ಆಕ್ಟೀವ್ ತಿರುಗುತ್ತಿದ್ದಂತೆ ಬೈಕ್ ಸವಾರ ನಿಯಂತ್ರಣ ಕಳೆದು ಮಧ್ಯೆಕ್ಕೆ ತೆರಳಿದ್ದಾನೆ. ಈ ಸಂದರ್ಭ ಎದುರಿನಿಂದ ಬಂದ ಓಮ್ನಿ ಬೈಕಿಗೆ ಡಿಕ್ಕಿ ಹೊಡೆದಿದೆ. ಆಕ್ಟೀವ್ ಚಲಾಯಿಸುತ್ತಿದ್ದ ಮಹಿಳೆ ಯಾವುದೇ ಗಾಯವಿಲ್ಲದೇ ಪಾರಾಗಿದ್ದಾರೆ. ಗಾಯಗೊಂಡ ಇಬ್ಬರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

 

Related posts

Leave a Reply

Your email address will not be published. Required fields are marked *