Header Ads
Header Ads
Breaking News

ಬೈಕ್ ಪಲ್ಟಿಯಾಗಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೃತ್ಯು

ಮೂಡುಬಿದಿರೆ: ಎಡಪದವು ಬಳಿ ಶುಕ್ರವಾರ ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ನವ್ಯಾ ಶೆಟ್ಟಿ(೨೧) ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.
ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಂಪನಿಯೊಂದರ ಕ್ಯಾಂಪಸ್ ಇಂಟರ್‌ವ್ಯೂವ್‌ಗೆ ತನ್ನ ಸಹಪಾಠಿ ದೇವಿ ಪ್ರಸಾದ್ ಶೆಟ್ಟಿ ಎಂಬವರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಎಡಪದವು ಬಳಿ ಎದುರಿನಿಂದ ಬರುತ್ತಿದ್ದ ಕಾರನ್ನು ಗಮನಿಸಿ ಬ್ರೇಕ್ ಹಾಕಿದಾಗ ಬೈಕ್ ಸ್ಕಿಡ್ ಆಗಿ ಬಿದ್ದು ಈ ಅಪಘಾತ ಸಂಭವಿಸಿದೆ.
ಮೃತ ನವ್ಯಾ ಶೆಟ್ಟಿ ಕಿನ್ನಿಗೋಳಿ ಕಿಲೆಂಜಾರಿನಲ್ಲಿ ಪ್ರಭಾಕರ ಶೆಟ್ಟಿ ಎಂಬವರ ಪುತ್ರಿ. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್‌ನ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು.

Related posts

Leave a Reply