Header Ads
Header Ads
Breaking News

ಬೈಕ್ ಮತ್ತು ಟೆಂಪೊ ಲಾರಿ ಢಿಕ್ಕಿ:ಬೈಕ್ ಸವಾರನಿಗೆ ಗಾಯ:ಪುತ್ತೂರಿನ ಪರ್ಲಡ್ಕದಲ್ಲಿ ನಡೆದ ಘಟನೆ

ಪುತ್ತೂರು: ಪರ್ಲಡ್ಕ ಬೈಪಾಸ್ ರಸ್ತೆಯಲ್ಲಿ ಬೈಕ್ ಮತ್ತು ಪಶು ಆಹಾರ ಸಾಗಾಟದ 407 ಲಾರಿಯೊಂದು ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ನಿನ್ನೆ ಸಂಜೆ ನಡೆದಿದೆ.

ಪರ್ಲಡ್ಕ ಬಾಲವನ ರಸ್ತೆಯಿಂದ ಬರುತ್ತಿದ್ದ ಪಶು ಆಹಾರ ಸಾಗಾಟ ಕ್ವಾಲಿಟಿ ಪಾರಂನ 407 ಲಾರಿ ಮತ್ತು ಬೈಪಾಸ್ ರಸ್ತೆಯಲ್ಲಿ ನೆಹನಗರ ಕಡೆ ಹೋಗುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಅಬ್ದುಲ್ ಆಸೀಫ್ ಎಂಬವರು ಗಾಯಗೊಂಡಿದ್ದು, ಅವರನ್ನು ಇಲ್ಲಿನ ಚೇತನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ಕುರಿತು ಸಂಚಾರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.

Related posts

Leave a Reply