Header Ads
Header Ads
Breaking News

ಬೈಕ್ ಮತ್ತು ಟ್ರಕ್ ಡಿಕ್ಕಿ ಬೈಕ್ ಸವಾರ ಸಾವು ಕೋಟದ ಗಾವಳಿ ಎಂಬಲ್ಲಿ ನಡೆದ ಘಟನೆ

ಕುಂದಾಪುರ : ಕೋಟ ಠಾಣಾ ವ್ಯಾಪ್ತಿಯ ಗಾವಳಿ ಎಂಬಲ್ಲಿ ಶನಿವಾರ ಬೆಳಂಬೆಳ್ಳಗ್ಗೆ ನಡೆದ ಬೈಕ್ ಮತ್ತು ಟ್ರಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮ್ರತರನ್ನು ಹಾಲಾಡಿ ನಿವಾಸಿ ಶಂಕರ ಕುಲಾಲ್ ರವರ ಪುತ್ರ ಶಬರೀಶ್ (20) ಎಂದು ಗುರುತಿಸಲಾಗಿದೆ.

ಮ್ರತನು ಹೋಟೆಲ್ ಮ್ಯಾನೆಮೆಂಟ ಕೋರ್ಸ್ ಮುಗಿಸಿ ಮಣಿಪಾಲದ ಹೋಟೆಲ್ ನೊಂದರಲ್ಲಿ ಕೆಲಸ ನಿರ್ವಹಿಸಿದ್ದರು. ಶನಿವಾರ ಬೆಳಗ್ಗೆ ಮಣಿಪಾಲಕ್ಕೆ ಕೆಲಸಕ್ಕೆ ತೆರಳಿದ್ದ ವೇಳೆ ಗಾವಳಿ ಎಂಬಲ್ಲಿ ಅಪಾಯಕಾರಿ ತಿರುವು ಇದ್ದು ಎದುರುಗಡೆಯಿಂದ ಬಂದ. ಮಂಗಳೂರಿನಿಂದ ಶಿವಮೊಗ್ಗಕ್ಜೆ ಕೋಕ್ ಸಾಗಿಸುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದು ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪ್ರತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಹರೀಶ್ ಕಿರಣ್ ತುಂಗ ಕುಂದಾಪುರ