Header Ads
Header Ads
Header Ads
Breaking News

ಬೈಕ್ ಮೆಕ್ಯಾನಿಕ್‌ರ ಕೃಷಿ ಪ್ರೀತಿ…

ವಿಟ್ಲ: ರೈತರು, ಕೃಷಿಕರು ಕೃಷಿ ಹಾಗೂ ಹೈನುಗಾರಿಕೆಯಲ್ಲಿ ವಿವಿಧ ರೀತಿಯಲ್ಲಿ ಸಾಧನೆ ಮಾಡಿರುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಬೈಕ್ ಮೆಕ್ಯಾನಿಕ್‌ಯೊಬ್ಬರು ತರಕಾರಿ ಕೃಷಿಯನ್ನು ತಮ್ಮ ಮನೆಯ ಛಾವಣಿಯಲ್ಲಿ ನೆಟ್ಟು ಇದೀಗ ಜನಮನ್ನಣೆಗೆ ಗಳಿಸಿದ್ದಾರೆ. ಈ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ನೋಡಿ…..

ವಿಟ್ಲ ಮೇಗಿನಪೇಟೆ ನಿವಾಸಿ, ವಿಟ್ಲ ಭಗವತೀ ದೇವಸ್ಥಾನದ ಎದುರುಗಡೆ ಇರುವ ಶೇಖರ್ ಆಟೋ ವರ್ಕ್ಸ್‌ನ ಬಕ್ ಮೆಕ್ಯಾನಿಕ್ ತರಕಾರಿ ಕೃಷಿಯನ್ನು ಹವ್ಯಾಸವಾಗಿ ಮಾಡಿ ಯಶಸ್ವಿಯಾಗಿದ್ದಾರೆ. ವಿಟ್ಲ ಸುತ್ತಮುತ್ತಲ ಬಕ್ ಸವಾರರಿಗೆ ಚಿರಪರಿಚಿತರಾದ ಯೂಸುಫ್ ಗಮಿ ಅವರು ಕಳೆದ ವರ್ಷ ಈ ಕಾಯಕ ಆರಂಭಿಸಿದರು. ಇರುವುದು 14 ಸೆಂಟ್ಸ್ ಜಾಗ. ಅದರಲ್ಲಿ ಮನೆ ಇದೆ. ಮತ್ತು ಕೆಲ ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಆದುದರಿಂದ ಮನೆ ಮೇಲೆ ಒಟ್ಟು 2000 ಚದರ ಅಡಿಯಷ್ಟು ವಿಸ್ತೀರ್ಣವಿರುವ ವಿಶಾಲ ಜಾಗವಿದೆ. ಬಕ್ ದುರಸ್ತಿಗೆಂದು ಹೋದಾಗ ಮನೆಯವರು ಬೆಂಡೆ ನೀಡಿದ್ದರು. ಅದನ್ನು ಬೀಜವಾಗಿಸಿದ ಅವರು ಹತ್ತಾರು ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ಬೆಳೆಸಲು ಆರಂಭಿಸಿದರು.

ಆಗಸ್ಟ್ ತಿಂಗಳಲ್ಲಿ ಬಿತ್ತಿದ ಬೀಜದಲ್ಲಿ ಒಂದು ತಿಂಗಳ ಬಳಿಕ ಬೆಳೆ ಪಡೆಯುವ ಅವರ ಗುರಿಯೂ ಈಡೇರಿದೆ. ಮತ್ತು ಮಾರ್ಚ್, ಎಪ್ರಿಲ್ ತಿಂಗಳಲ್ಲಿ ನೀರಿನ ಬರ ಬರದೇ ಇದ್ದರೆ ಅಲ್ಲಿತನಕವೂ ಬೆಳೆಯನ್ನು ಪಡೆಯಬೇಕೆಂದು ಆಶಯ ವ್ಯಕ್ತಪಡಿಸುತ್ತಾರೆ ಯೂಸುಫ್ ಗಮಿ ಅವರು

ತಾರಸಿಯಿಂದ ತೊಂಡೆ ಚಪ್ಪರವವನ್ನೂ ಇಳಿಸಲಾಗಿದೆ. ಮನೆ ಮುಂದಿನ ಭಾಗದಲ್ಲಿ ತೊಂಡೆ ಬುಡವೆದ್ದು ತಾರಸಿಗೇರುತ್ತದೆ. ಆ ಚಪ್ಪರದಲ್ಲಿ ತೊಂಡೆಕಾಯಿಯನ್ನೂ ಪಡೆಯುತ್ತಿರುವ ಅವರು ಈ ಕೃಷಿಗಾಗಿ ಆಡಿನ ಹಿಕ್ಕೆಯನ್ನು ಬಳಸುತ್ತಾರೆ. ಅದಕ್ಕಾಗಿ ಆಡು ಮತ್ತು ಕೋಳಿಯನ್ನೂ ಸಾಕುತ್ತಾರೆ. ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೇ ಹಿತ ಮಿತವಾಗಿ ಬೆಳೆಸುವ ಇವರ ಕೃಷಿ ಮಾದರಿಯಾಗಿದೆ. ಅನುಕರಣೀಯವಾಗಿದೆ.

ದ್ರಾಕ್ಷೆ, ನಿಂಬೆ, ಕಹಿಬೇವು, ತೆಂಗು ಎಲ್ಲವೂ ಇಲ್ಲಿದೆ. ಇರುವ ಸ್ವಲ್ಪ ಜಾಗದಲ್ಲಿ ಮೆಕ್ಯಾನಿಕ್ ಯೂಸುಫ್ ಅವರ ಕೃಷ್ಯುತ್ಪನ್ನಗಳಿಗೆ ಭಾರೀ ಬೇಡಿಕೆಯೂ ಇದೆ. ಸಾವಯವ ಬೆಂಡೆ, ತೊಂಡೆಕಾಯಿಗಳನ್ನು ಮೆಕ್ಯಾನಿಕ್ ಶಾಪ್‌ನಲ್ಲಿ ತಂದಿಟ್ಟರೆ ತತ್‌ಕ್ಷಣ ಮಾರಾಟವೂ ಆಗುತ್ತಿದೆ. ಇವರಿಗೆ ಮಾಲಕರಾದ ಚಂದ್ರಶೇಖರ ಭಟ್ ಪಡಾರು ಅವರ ಬೆಂಬಲವೂ ಇದೆ. ತನ್ನ ಬೈಕ್ ಮೆಕ್ಯಾನಿಕ್ ವೃತ್ತಿಯ ನಡುವೆಯೂ ತರಕಾರಿ ಕೃಷಿಯತ್ತ ವಿಶೇಷ ಗಮನ ಹರಿಸಿರುವ ಯೂಸುಫ್ ಅವರ ಕಾರ್ಯ ಶ್ಲಾಘನೀಯವಾಗಿದೆ.

Related posts

Leave a Reply