

ಪುತ್ತೂರು : ಬೈಕ್ ಹಾಗೂ ರಿಕ್ಷಾ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಕಾಲೇಜ್ ವಿದ್ಯಾರ್ಥಿ ಧಾರುಣವಾಗಿ ಮೃತಪಟ್ಟ ಘಟನೆ ಪುತ್ತೂರು ನಗರದ ಹೊರವಲಯ ಮುರದಲ್ಲಿ ನಡೆದಿದೆ.
ಬನ್ನೂರು ನಿವಾಸಿ ಅಭಿನವ್ ( 18) ಮೃತಪಟ್ಟ ಕಾಲೇಜ್ ವಿದ್ಯಾರ್ಥಿ. ಈತ ಸುಳ್ಯದ ಕೆ.ವಿ.ಜಿ ಕಾಲೇಜ್ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಈತ ಚಲಾಯಿಸುತ್ತಿದ್ದ ಬೈಕ್ ಹಾಗೂ ಆಟೋ ರಿಕ್ಷಾದ ಮಧ್ಯೆ ಈ ಅಪಘಾತ ನಡೆದಿದೆ.
ಅಪಘಾತವೂ ಪುತ್ತೂರಿನಿಂದ ಕೆದಿಲಕ್ಕೆ ತಿರುಗುವ ರಸ್ತೆ ತಿರುವಿನಲ್ಲಿ ನಡೆದಿದೆ. ಅಭಿನವ್ ಚಲಾಯಿಸುತಿದ್ದ ಬೈಕ್ ಕಬಕ ಕಡೆಯಿಂದ ಪುತ್ತೂರಿನೆಡೆಗೆ ಬರುತಿದ್ದಾಗ, ಕೆದಿಲ ಕಡೆ ಹೋಗಲು ಅಟೋ ರಿಕ್ಷಾ ರಸ್ತೆ ದಾಟುತಿದ್ದಾಗ ಡಿಕ್ಕಿ ನಡೆದಿದೆ.
ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಅಭಿನವ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪುತ್ತೂರಿನ ಸಂಚಾರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.