Header Ads
Header Ads
Breaking News

“ಬೈತುರಹ್ಮ”ವತಿಯಿಂದ ಬಡ ಕುಟುಂಬಕ್ಕೆ ಮನೆ: ಕೀಲಿಕೈ ಹಸ್ತಾಂತರ

ಮಂಜೇಶ್ವರ: ನಿರ್ಗತಿಕ ಕುಟುಂಬಗಳನ್ನು ಗುರುತಿಸಿಕೊಂಡು ಜಾತಿ ಧರ್ಮ ಬೇಧ ಬಾವ ಇಲ್ಲದೆ ಸರ್ವ ಧರ್ಮೀಯರಿಗೂ ನೆರಳಾದ ಕಾರುಣ್ಯ ಕೆಲಸದಲ್ಲಿ ಮಗ್ನರಾಗಿರುವ ಮುಸ್ಲಿಂ ಲೀಗ್ ಬೈತುರಹ್ಮ (ಕಾರುಣ್ಯ ಮನೆ) ಜಿಲ್ಲೆಯ ಮೂಲೆ ಮೂಲೆಗೂ ತಲುಪುತ್ತಿದೆ.ವಿವಿಧ ಪ್ರದೇಶಗಳಲ್ಲಿ ಮನೆ ನಿರ್ಮಾಣ ಕಲಸ ಕೂಡಾ ನಡೆಯುತ್ತಿದೆ. ಇದರಂತೆ ದುಬೈ ಕೆಂ ಎಂ ಸಿ ಸಿ ವತಿಯಿಂದ ಸಮಾರು7.5 ಲಕ್ಷ ರೂ . ವೆಚ್ಚದಲ್ಲಿ ಮಂಜೇಶ್ವರ ಗ್ರಾ. ಪಂ. ನ 19 ನೇ ವಾರ್ಡಿನಲ್ಲಿ ನಿರ್ಮಿಸಲಾದ ಬೈತು ರಹ್ಮ ಕಾರುಣ್ಯ ಮನೆಯ ಕೀಲಿ ಹಸ್ತಾಂತರ ಸಮಾರಂಭ ಉದ್ಯಾವರ ಸಾವಿರ ಜಮಾಹತ್ ಪರಿಸರದಲ್ಲಿ ನಡೆಯಿತುದುಬೈ ಕೆಂ ಎಂ ಸಿ ಸಿ ಅಧ್ಯಕ್ಷ ಅಯ್ಯೂಬ್ ಉರ್ಮಿಯವರ ಅಧ್ಯಕ್ಷತೆಯಲ್ಲಿ ನಡೆದ ಬೈತು ರಹ್ಮ ಕಾರುಣ್ಯ ಮನೆಯ ಕೀಲಿ ಹಸ್ತಾಂತರ ಸಮಾರಂಭವನ್ನು ಮಾಜಿ ಶಾಸಕ ಹಾಗೂ ಮುಸ್ಲಿಂ ಲೀಗ್ ರಾಜ್ಯ ಕೋಶಾಧಿಕಾರಿ ಸಿ ಟಿ ಆಹ್ಮದಲಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಮುಸ್ಲಿಂ ಲೀಗ್ ನ ಕಾರ್ಯಕರ್ತರು ಅದರ ಪೋಷಕ ಸಂಘಟನೆಗಳು ಜಾತ ಮತ ಬೆರೆತು ದಾರಿದ್ರ್ಯವನ್ನು ನಿರ್ಮೂಲನಗೊಳಿಸವ ತವಕದಲ್ಲಿದ್ದಾರೆ. ಪಾಣಕ್ಕಾಡ್ ಶಿಹಾಬ್ ತಂಘಲ್ ರವರಿಂದ ಚಾಲನೆ ದೊರಕಿಸಿಕೊಂಡ ಬೈತು ರಹ್ಮ ಇದೀಗ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಮಾತ್ರವಲ್ಲ ಉತ್ತರ ಭಾರತದಲ್ಲೂ ಸಕ್ರಿಯವಾಗಿದೆ. ಇದಕ್ಕೆ ತಮ್ಮೆಲ್ಲರ ಬೆಂಬಲ ಅತೀ ಅಗತ್ಯ ವೆಂದು ಹೇಳಿದರು.ಬಳಿಕ ಉದ್ಯಾವರ ಜುಮಾ ಮಸೀದಿ ಪರಿಸರದಲ್ಲಿರುವ ಬಡ ಕುಟುಂಬಕ್ಕೊಳಪಟ್ಟ ದಿವಂಗತ ಆದಂ ಕುಂಞಿಯವರ ಕುಟುಂಬಕ್ಕೆ ಅತ್ತಾವುಲ್ಲ ತಂಘಲ್ ರವರು ಕೀಲಿಯನ್ನು ಹಸ್ತಾಂತರಿಸಿದರು. ಕೆ ಎಸ್ ಶಮೀಂ ತಂಘಲ್ ಪ್ರಾರ್ಥಣೆ ನರವೇರಸಿದರು.ಈ ಸಂದರ್ಭ ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್, ಗ್ರಾ. ಪಂ. ಅಧ್ಯಕ್ಷ ಅಝೀಝ್ ಹಾಜಿ, ಮಕ್ತಾರ್ ಎ. ಮಸ್ಲಿಂ ಲೀಗ್ ಮಂಡಲ ಕಾರ್ಯದರ್ಶಿ ಎಂ ಅಬ್ಬಾಸ್ , ಜಿಲ್ಲಾ ಕಾರ್ಯದರ್ಶಿ ಅಝೀಝ್ ಮರಿಕೆ, ನೇತಾರರಾದ ಅಶ್ರಫ್ ಕಾರ್ಲ, ಪಿ ಎಚ್ ಅಬ್ದುಲ್ ಹಮೀದ್, ಅಬ್ದುಲ್ ರಹ್ಮಾನ್ ಯು ಎಚ್, ಹನೀಫ್ ಕಲ್ಮಟ್ಟ, ಮೊಹಮ್ಮದ್ ಕುಂಞಿ ಎರಿಯಾಲ್ ಮೊದಲಾದವರು ಉಪಸ್ಥರಿದ್ದರು.

Related posts

Leave a Reply