Header Ads
Breaking News

ಬೈಲೂರು-ಕೊರಂಗ್ರಪಾಡಿ ರಸ್ತೆ ಅಗಲೀಕರಣಕ್ಕೆ ಚಾಲನೆ : ನನಸಾಗುತ್ತಿದೆ ಹಲವು ವರ್ಷಗಳ ಬೇಡಿಕೆ

ಬಹು ವರ್ಷಗಳ ಬೇಡಿಕೆಯಾದ ಬೈಲೂರು -ಕೊರಂಗ್ರಪಾಡಿ ರಸ್ತೆ ಅಗಲೀಕರಣದ ಪ್ರಕ್ರೀಯೆ ಆರಂಭಅವಾಗಿದೆ. ಪ್ರಸ್ತುತ ಹದಿನೈದು ಫೀಟ್‍ನ ರಸ್ತೆ ಇದ್ದು ಇದರಿಂದ ವಾಹನ ಓಡಾಟಕ್ಕೆ ಬಹಳ ತೊಂದರೆಯಾಗುತ್ತಿತ್ತು. ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯನ್ನು ಸಂದಿಸುವುದರಿಂದ ವಾಹನ ಓಡಾಟ ಜಾಸ್ತಿ ಇದ್ದು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿತ್ತು. ಕಳೆದ ಸರಕಾರದ ಅವಧಿಯಲ್ಲಿ ಈ ರಸ್ತೆಯ ಅಗಲೀಕರಣ ಪ್ರಸ್ತಾಪ ಸರಕಾರಕ್ಕೆ ಸಲ್ಲಿಸಲಾಗಿದ್ದು ಇತ್ತೀಚಿಗೆ ರಾಸ್ತೆ ಅಗಲೀಕರಣದ ಗುರುತು ಕಾರ್ಯ ಮುಕ್ತಾಯವಾಗಿದೆ. ಸದ್ಯ ಹದಿನೈದು ಫೀಟ್‍ನ ರಸ್ತೆಯನ್ನು ನಲವತ್ತು ಫೀಟ್‍ಗೆ ವಿಸ್ತರಣೆ ಮಾಡಲಾಗುವುದು. ಭೂಮಾಲೀಕರು ಸ್ವ ಇಚ್ಚೆಯಿಂದ ಜಾಗ ಬಿಟ್ಟುಕೊಟ್ಟಿದ್ದು ಯಾವುದೇ ಭೂ ಮಾಲೀಕರಿಗೆ ಪರಿಹಾರ ಕೊಟ್ಟಿಲ್ಲ. ಆದ್ದರಿಂದ ನಗರಾಭಿವೃದ್ಧಿ ಪ್ರಾಧಿಕಾರದಿಂದ ಟಿಡಿಆರ್ ನಿಯಮದಡಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ರಸ್ತೆ ಅಗಲೀಕರಣದ ಕಾರ್ಯ ಚುರುಕುಗೊಂಡಿದೆ.

Related posts

Leave a Reply

Your email address will not be published. Required fields are marked *