Header Ads
Header Ads
Header Ads
Breaking News

ಬೊಕ್ಕಪಟ್ಣದಲ್ಲಿ ಅತ್ತಾವರ ಕೆಎಂಸಿ ವತಿಯಿಂದ ತಪಾಸಣಾ ಶಿಬಿರ

ಶ್ರೀ ವೀರ ವಿನಾಯಕ ಜನಸೇವಾ ಟ್ರಸ್ಟ್, ಯುವಜನ ಸಂಘ ಬೊಕ್ಕಪಟ್ಣ, ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ಬೆನ್ನುನೋವು, ಕೀಲುನೋವು, ಉಚಿತ ಹೃದಯ ತಪಾಸಣಾ ಶಿಬಿರ ಮತ್ತು ನೊಂದಾಯಿತ ಕುಟುಂಬಗಳಿಗೆ ಮಣಿಪಾಲ ಸುರಕ್ಷಾ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ ಅಕ್ಷಯ ಸಭಾಂಗಣದಲ್ಲಿ ಜರುಗಿತು.


ಮಂಗಳೂರಿನ ಬೊಕ್ಕಪಟ್ಣದ ಅಕ್ಷಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಪ್ರೊಪೇಷನಲ್ ಕೊರಿಯರ್ ಪಾಲುದಾರರಾದ ಎಮ್. ನರೇಂದ್ರನಾಥ್ ನಾಯಕ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವೀರ ವಿನಾಯಕ ಜನಸೇವ ಟ್ರಸ್ಟ್ ಮತ್ತು ಕೆಎಂಸಿ ಆಸ್ಪತ್ರೆಯ ಸಹಕಾರದೊಂದಿಗೆ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಬಡ ಜನಸಾಮಾನ್ಯರಿಗೆ ನೆರವಾಗುತ್ತಿದೆ ಎಂದರು.
ಅನಂತರ ಅತ್ತಾವರದ ಕೆಎಂಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥರಾದ ರಾಕೇಶ್ ಅವರು ಮಣಿಪಾಲ ಸುರಕ್ಷಾ ಆರೋಗ್ಯ ಕಾರ್ಡ್ ಬಗೆಗೆ ಮಾಹಿತಿ ನೀಡಿದರು.
ಇದೇ ವೇಳೆ ಹಲವಾರು ಮಂದಿ ಬೆನ್ನುನೋವು, ಕೀಲುನೋವು, ಉಚಿತ ಹೃದಯ ತಪಾಸಣಾ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕೆಎಂಸಿ ಆಸ್ಪತ್ರೆಯ ಎಲುಬು ತಜ್ಞರಾದ ಡಾ. ಪ್ರೇಮ್ ಕೋಟ್ಯಾನ್, ಕೆಎಂಸಿ ಆಸ್ಪತ್ರೆಯ ಹಿರಿಯ ಹೃದಯ ತಜ್ಞರಾದ ಡಾ. ಮನೀಷ್ ಎಂ. ರೈ, ಯುವಜನ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಶ್ರೀ ವೀರ ವಿನಾಯಕ ಜನಸೇವಾ ಟ್ರಸ್ಟ್‌ನ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply