Header Ads
Header Ads
Breaking News

ಬೊಕ್ಕಪಟ್ಣದ ’ಯುವಜನ ಸಂಘ’ದಿಂದ 50ನೇ ಗಣೇಶೋತ್ಸವ.ಮತ್ತಷ್ಟು ಮೆರುಗು ನೀಡಲಿದೆ ವಿ4 ನ್ಯೂಸ್‌ನ ’ಸಿಪಿಎಲ್- ಸೀಸನ್ 2’.

ಸೆ.13ರಿಂದ 16ರವರೆಗೆ ನಡೆಯಲಿರುವ ಕಾರ್ಯಕ್ರಮಬೊಕ್ಕಪಟ್ಣ ಅಕ್ಷಯ ಸಭಾಂಗಣದಲ್ಲಿ ಕಾರ್ಯಕ್ರಮ.ಯುವಜನ ಸಂಘದ ಅಧ್ಯಕ್ಷ ಯೋಗೀಶ್ ಆರ್. ಸಾಲ್ಯಾನ್ ಹೇಳಿಕೆ.ಮಂಗಳೂರಿನ ಬೊಕ್ಕಪಟ್ಣದ ಯುವಜನ ಸಂಘದ ಆಶ್ರಯದಲ್ಲಿ ೫೦ನೇ ವರ್ಷದ ಸಾರ್ವಜನಿಕ ಶ್ರ ಗಣೇಶೋತ್ಸವವು ಸೆ.13ರಿಂದ 16ರವರೆಗೆ ನಡೆಯಲಿದೆ. ಗಣೇಶೋತ್ಸವದ ಸುವರ್ಣ ಸಂಭ್ರಮಕ್ಕೆ ವಿ4 ನ್ಯೂಸ್‌ನ ’ಕಾಮೆಡಿ ಪ್ರೀಮಿಯರ್ ಲೀಗ್’ ಇನ್ನಷ್ಟು ಮೆರುಗು ತಂದುಕೊಡಲಿದೆ ಎಂದು ಯುವಜನ ಸಂಘದ ಅಧ್ಯಕ್ಷ ಯೋಗೀಶ್ ಆರ್. ಸಾಲ್ಯಾನ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸೆ.13ರಿಂದ 16ರವರೆಗೆ ಬೊಕ್ಕಪಟ್ಣದ ಶ್ರೀ ವೀರವಿನಾಯಕ ಜನಸೇವಾ ಟ್ರಸ್ಟ್‌ನ ಅಕ್ಷಯ ಸಭಾಂಗಣದಲ್ಲಿ 50ನೇ ಗಣೇಶೋತ್ಸವ ಸಂಪನ್ನಗೊಳ್ಳಲಿದೆ. ಕಾರ್ಯಕ್ರಮವನ್ನು ಉದ್ಯಮಿ ಭರತ್ ಭೂಷಣ್ ಉದ್ಘಾಟಿಸಲಿದ್ದು, ಮೊದಲ ದಿನ ಸಾನಿಧ್ಯ ಭಿನ್ನಸಾಮರ್ಥ್ಯದ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸೆ.14ರಂದು ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ, ಮೂಡಪ್ಪ ಸೇವೆ, ಮಹಾಪೂಜೆ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.15ರಂದು 108ಕಾಯಿಯ ಗಣಹೋಮ, ಹರಿನಾಮ ಸಂಕೀರ್ತನೆ, ಮತ್ತು ವಿ೪ ನ್ಯೂಸ್ ಮೀಡಿಯಾ ಪ್ರಾಯೋಜಿತ ಕಾಮೆಡಿ ಪ್ರೀಮಿಯರ್ ಲೀಗ್ ನಡೆಯಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಯುವಜನ ಸಂಘದ ಉಪಾಧ್ಯಕ್ಷ ಜಯೇಂದ್ರನಾಥ್ ಬಿ., ಕಾರ್ಯದರ್ಶಿ ಅರುಣ್ ಕುಮಾರ್, ಜೊತೆ ಕಾರ್ಯದರ್ಶಿ ವರುಣ್ ಕರ್ಕೇರ, ಅಕ್ಷಿತ್ ಸುವರ್ಣ, ಪದಾಧಿಕಾರಿಗಳಾದ ನರೇಂದ್ರ ಸಾಲ್ಯಾನ್, ರಾಜ್‌ಕುಮಾರ್ ಕೋಟ್ಯಾನ್ ಉಪಸ್ಥಿತರಿದ್ದರು

Related posts

Leave a Reply