Header Ads
Header Ads
Breaking News

ಬೊಕ್ಕಪಟ್ಣದ ಯುವಜನ ಸಂಘ ಅಕ್ಷಯ. ಸಾರ್ವಜನಿಕ ಗಣೇಶೋತ್ಸವದ ಸುವರ್ಣ ಸಂಭ್ರಮ. ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆ. ಛದ್ಮವೇಷ ಸ್ಪರ್ಧೆ.

ಮಂಗಳೂರಿನ ಬೊಕ್ಕಪಟ್ಣದ ಯುವಜನ ಸಂಘ ಅಕ್ಷಯ ವತಿಯಿಂದ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವವು ಈ ವರುಷ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಆ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪಧೆಗಳನ್ನು ಆಯೋಜಿಸಿದ್ದರು.ಯುವಜನ ಸಂಘ ಅಕ್ಷಯದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಕಳೆದ 49 ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದು, ಈ ಬಾರಿ50ನೇ ಗಣೇಶೋತ್ಸವವನ್ನು ಆಚರಿಸಲು ಅದ್ದೂರಿಯಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ.

ಆ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಲಾಯಿತು. ವೈಯುಕ್ತಿಕ ಹಾಗೂ ತಂಡಗಳ ವಿಭಾಗದಲ್ಲಿ ನಡೆದ ಛದ್ಮವೇಷ ಸ್ಪರ್ದೆಯಲ್ಲಿ ಒಟ್ಟು50 ಮಂದಿ ವೈಯುಕ್ತಿಕ ವಿಭಾಗಗಳಲ್ಲಿ ಭಾಗವಹಿಸಿದರೆ 15ತಂಡಗಳು ಗುಂಪು ಛದ್ಮವೇಷ ಸ್ಪರ್ದೆಯಲ್ಲಿ ಭಾಗವಹಿಸಿದ್ದರು.ಸ್ಪರ್ಧೆಯ ತೀರ್ಪುಗಾರರಾಗಿ ಖ್ಯಾತ ನಿರೂಪಕ ವಿ.ಜೆ ದೇವ್, ತುಳು ಚಲನಚಿತ್ರ ನಟಿ ಶಿಲ್ಪಾ ಸುವರ್ಣ ಹಾಗೂ ಜೀತೇಶ್ ಪುತ್ರನ್ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಯೋಗೀಶ್ ಆರ್ ಸಾಲ್ಯಾನ್, ಟ್ರಸ್ಡ್‌ನ ಅಧ್ಯಕ್ಷರಾದ ಕಿಶೋರ್ ಕುಮಾರ್ ಶೆಟಿ ಉಪಸ್ಥಿತರಿದ್ದರು,

Related posts

Leave a Reply