Breaking News

ಬೊಳಂತಿಮೊಗರು ಕೊಚ್ಚಿ ಹೋದ ಮಣ್ಣಿನ ರಸ್ತೆ, ವಾಹನ ಚಾಲಕರು, ಸಾರ್ವಜನಿಕರಿಗೆ ಸಮಸ್ಯೆ

ವಿಟ್ಲ ಸಮೀಪದ ಬೊಳಂತಿಮೊಗರು ಕಡೆಯಿಂದ ಮಾಡೇಲು, ಕಾಮಟಾ, ಕೋಡಿ ಮೊದಲಾದ ಪರಿಸರಗಳನ್ನು ಸಂಪರ್ಕಿಸುವ ಮಣ್ಣಿನ ರಸ್ತೆ ಸಂಪೂರ್ಣವಾಗಿ ಮಳೆ ನೀರಿಗೆ ಕೊಚ್ಚಿ ಹೋದ ಪರಿಣಾಮ ವಾಹನ ಚಾಲಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಕಷ್ಟ ಅನುಭವಿಸುತ್ತಿದ್ದಾರೆ.
ಸುಮಾರು ಇಪ್ಪತ್ತು ವರ್ಷಗಳಿಂದ ಮಣ್ಣಿನ ರಸ್ತೆಯನ್ನು ಅವಲಬಿಸಿರುವ ಗ್ರಾಮಸ್ಥರು ಇನ್ನೂ ಡಾಮರು ಭಾಗ್ಯ ಕಂಡಿಲ್ಲ. ಈ ಭಾಗದಲ್ಲಿ ೪೫ಕ್ಕಿಂತಲೂ ಅಧಿಕ ಮನೆಗಳಿವೆ. ಅದರಲ್ಲಿ ಹಿಂದುಳಿದ ವರ್ಗಗಳ ಮನೆಗಳು ಅಧಿಕವಿದೆ. ಪುತ್ತೂರು ವಿಟ್ಲ ಕಡೆಯಿಂದ ಬರುವ ಶಾಲಾ ವಾಹನಗಳು ರಸ್ತೆ ಸರಿಯಿಲ್ಲದ ಪರಿಣಾಮ ಅರ್ಧದಲ್ಲಿ ಮಕ್ಕಳನ್ನು ಇಳಿಸಿ ಹಿಂತಿರುತ್ತಿದ್ದಾರೆ. ಇದರಿಂದ ಮಕ್ಕಳು ಕೆಸರುಮಯವಾದ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕು. ಈ ಭಾಗದ ದ್ವಿಚಕ್ರ ವಾಹನ ಹಾಗೂ ಕಾರು ಚಾಲಕರು ರಾತ್ರಿ ವೇಳೆ ಮನೆಯೊಂದರ ಬಳಿ ನಿಲ್ಲಿಸಿ ಮನೆಯತ್ತ ತೆರಳುವ ಅನಿವಾರ್ಯತೆ ಎದುರಾಗಿದೆ.
ಬೊಳಂತಿಮೊಗರು, ನೆಲ್ಲಿಗುಡ್ಡೆ, ಕಂಬಳಬೆಟ್ಟು ರಸ್ತೆಯೂ ಇದೇ ರೀತಿಯಾಗಿ ಹದಗೆಟ್ಟಿತ್ತು. ಬಳಿಕ ಈ ಭಾಗದ ಬಹುವರ್ಷದ ಬೇಡಿಕೆಯಂತೆ ಶಾಸಕಿಯವರು ಅನುದಾನದಲ್ಲಿ ಡಾಮರೀಕರಣಗೊಂಡಿದೆ. ಆದರೆ ಮಾಡ್ತೇಲು ಕಡೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದುವರೆಗೂ ಅಭಿವೃದ್ಧಿ ಹೊಂದಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯತ್ ಹಾಗೂ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರು ಗಮನಕ್ಕೆ ತರಲಾಗಿದ್ದರೂ ಏನೂ ಪ್ರಯೋಜನವಾಗಿಲ್ಲ. ರಸ್ತೆ ಮಧ್ಯೆದಲ್ಲಿ ಹೊಂಡ ನಿರ್ಮಾಣಗೊಂಡು ರಸ್ತೆಯಲ್ಲಿ ನೀರು ಹರಿಯುತ್ತಿದೆ. ಇದರಿಂದ ಇಡೀ ರಸ್ತೆ ಕೆಸರಮಯವಾಗಿ ಮೈಯಲ್ಲ ಕೆಸರು ಅಂಟಿಕೊಳ್ಳುತ್ತಿದೆ ಎಂದು ಗ್ರಾಮಸ್ಥರು ಅಳಲು ವ್ಯಕ್ತಪಡಿಸಿದ್ದಾರೆ.

Related posts

Leave a Reply