Header Ads
Header Ads
Breaking News

ಬೊಳಂತಿಲ-ದರ್ಬೆ ರಸ್ತೆಯ ಅಭಿವೃದ್ಧಿ ವಿಚಾರ ರಸ್ತೆ ಅಗಲಗೊಳಿಸದ ಬಗ್ಗೆ ಸಾರ್ವಜನಿಕರ ಆರೋಪ ಹಿನ್ನೆಲೆ ಎಂಜಿನಿಯರನ್ನು ಕರೆಸಿ ಸ್ಥಳ ಪರಿಶೀಲನೆ ನಡೆಸಿ ನಮ್ಮೂರ-ನೆಕ್ಕಿಲಾಡಿ ಅಪಾಯಕಾರಿ ವಿದ್ಯುತ್ ಕಂಬ ತೆಗೆಯಲು ಮನವಿ

ಬೊಳಂತಿಲ-ದರ್ಬೆ ರಸ್ತೆಯ ಅಭಿವೃದ್ಧಿ ವೇಳೆ ಯೋಜನಾ ವರದಿಯಲ್ಲಿರುವಂತೆ ರಸ್ತೆಯನ್ನು ಅಗಲಗೊಳಿಸಿಲ್ಲ ಎಂಬ ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ‘ನಮ್ಮೂರ- ನೆಕ್ಕಿಲಾಡಿ’ ಸಂಸ್ಥೆಯವರು ಸ್ಥಳಕ್ಕೆ ಕಾಮಗಾರಿ ಎಂಜಿನಿಯರ್ ಅವರನ್ನು ಕರೆಸಿ, ಈ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೇ, ಸ್ಥಳಕ್ಕೆ ಮೆಸ್ಕಾಂ ಜೆಇಯವರನ್ನು ಕರೆಸಿ ರಸ್ತೆ ಬದಿ ಇರುವ ಅಪಾಯಕಾರಿಯಾಗಿರುವ ವಿದ್ಯುತ್ ಕಂಬಗಳನ್ನು ತೆಗೆಯಲು ಮನವಿ ಮಾಡಿದರು.

34ನೇ ನೆಕ್ಕಿಲಾಡಿ ಗ್ರಾಮದ ಬೊಳಂತಿಲ- ದರ್ಬೆ ರಸ್ತೆಯ ಅಭಿವೃದ್ಧಿಗಾಗಿ 107.50 ಲಕ್ಷ ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭವಾಗಿದೆ. ಇದರ ಯೋಜನಾ ವರದಿಯಂತೆ ರಸ್ತೆಯು ಚರಂಡಿ ಬಿಟ್ಟು ಏಳೂವರೆ ಮೀಟರ್ ಅಗಲಗೊಳ್ಳಬೇಕಿದೆ. ಆದರೆ ಕೆಲವು ಕಡೆ ಈ ರಸ್ತೆಯನ್ನು ಏಳೂವರೆ ಮೀಟರ್‌ನಷ್ಟು ಅಗಲಗೊಳಿಸಲಾಗುತ್ತಿಲ್ಲ ಎಂಬ ಆರೋಪದೊಂದಿಗೆ ಇನ್ನು ಕೆಲವು ಕಡೆ ರಸ್ತೆ ಅಗಲಗೊಂಡಾಗ ರಸ್ತೆಯಲ್ಲಿಯೇ ವಿದ್ಯುತ್ ಕಂಬಗಳು ಬರುತ್ತಿದ್ದು, ಇದನ್ನು ಮೆಸ್ಕಾಂನವರು ತೆಗೆಯಲು ಮುಂದಾಗುತ್ತಿಲ್ಲ ಎಂಬ ದೂರು ಸಾರ್ವಜನಿಕ ವಲಯದಿಂದ ‘ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಗೆ ಬಂದಿತ್ತು. ಇದಕ್ಕೆ ಈ ಪರಿಶೀಲನೆ ನಡೆಸಲಾಯಿತು.ಸ್ಥಳಕ್ಕೆ ಈ ಯೋಜನೆಯ ಎಂಜಿನಿಯರ್ ಜನಾರ್ದನ್, ಮೆಸ್ಕಾಂ ಉಪ್ಪಿನಂಗಡಿ ಉಪವಿಭಾಗದ ಜೆಇ ಸುಂದರ್ ಹಾಗೂ 34ನೇ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ರತಿ ಎಸ್. ನಾಯ್ಕ ಅವರನ್ನು ಕರೆದು ‘ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಯ ಸದಸ್ಯರು ಎಲ್ಲರ ಸಮಕ್ಷಮ ರಸ್ತೆಯ ಅಳತೆ ಕಾರ್ಯ ನಡೆಸಲಾಯಿತು. ಈ ಸಂದರ್ಭ ‘ನಮ್ಮೂರು- ನೆಕ್ಕಿಲಾಡಿ’ಯವರ ಮಾಡಿದ ಮನವಿಗೆ ಜೆಇಯವರು ತಕ್ಷಣ ಸ್ಪಂದಿಸಿ 10 ವಿದ್ಯುತ್ ಕಂಬಗಳ ತೆರವಿಗೆ ಯೋಜನಾ ವೆಚ್ಚ ಸಿದ್ಧಗೊಳಿಸಿ, ಇಲಾಖೆಗೆ ನೀಡಲಾಗುವುದು. ವಾರದೊಳಗೆ ಇದನ್ನು ತೆರವು ಮಾಡಿಕೊಡುವುದಾಗಿ ಭರವಸೆ ನೀಡಿದರು.
ವರದಿ: ದೀಪಕ್ ಉಪ್ಪಿನಂಗಡಿ