Breaking News

ಎರ್ಮಾಳಿನಲ್ಲಿ ಇಂಜಿನ್‌ನಿಂದ ಬೇರ್ಪಟ್ಟ ಬೋಗಿಗಳು, ರೈಲು ಸಂಚಾರ ನಾಲ್ಕು ಗಂಟೆಗೂ ಅಧಿಕ ಹೊತ್ತು ವ್ಯತ್ಯಯ

ಪಡುಬಿದ್ರಿ: ಗೋವಾ ಕಡೆಯಿಂದ ಮಂಗಳೂರಿಗೆ ಅಕ್ಕಿ ಹೇರಿಕೊಂಡು ಬರುತ್ತಿದ್ದ ರೈಲೊಂದರ ಬೋಗಿಯ ಜೋಡನೆ ಅದಮಾರು ರೈಲ್ವೇ ಕ್ರಾಸಿಂಗ್ ಗೇಟ್ ಬಳಿ ತುಂಡಾಗಿ ಕಳಚಿ ಬಿದ್ದ ಪರಿಣಾಮ ಬೋಗಿಗಳು ರೈಲು ಹಳಿಯಲ್ಲೇ ಉಳಿದು ಹೋಗಿದ್ದರಿಂದ ನಾಲ್ಕು ಗಂಟೆಗೂ ಅಧಿಕ ಹೊತ್ತು ರೈಲುಗಳ ಸಂಚಾರದಲ್ಲಿ ವ್ಯತ್ಯಾಯವಾಗಿದೆ.
ಗುರುವಾರ ರಾತ್ರಿ 4-15ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು ನಲ್ವತ್ತು ಬೋಗಿಗಳಿದ್ದ ಈ ರೈಲು ಇಂಜಿನ್ ಕೇವಲ ಏಳು ಬೋಗಿಗಳೊಂದಿಗೆ ಮುಂದೆ ಸಾಗಿದರೆ ಉಳಿದ ೩೩ ಬೋಗಿಗಳು ಎರ್ಮಾಳು ಸಮೀಪದ ಅದಮಾರು ರೈಲ್ವೆ ಗೇಟ್ ಕ್ರಾಸಿಂಗ್ ಬಳಿ ಸ್ಥಗಿತಗೊಂಡಿದೆ. ಈ ಅಘಾತಕ್ಕೆ ರೈಲು ಹಳಿಯ ದೋಷ ಇರ ಬಹುದೆಂಬ ಶಂಕೆ ವ್ಯಕ್ತವಾಗಿದ್ದರೂ ರೈಲ್ವೆ ಅಧಿಕಾರಿಗಳು ಯಾವುದನ್ನೂ ದೃಢ ಪಡಿಸುತ್ತಿಲ್ಲ. ನಂದಿಕೂರು ಸ್ಟೆಷನ್‌ನಿಂದ ತರಿಸಲಾದ ಮತ್ತೊಂದು ಬದಲಿ ಇಂಜಿನ್‌ಗೆ ಬೋಗಿಗಳನ್ನು ಜೋಡಿಸುವ ಮೂಲಕ ಎರಡು ಗಂಟೆಗಳ ಬಳಿಕ ಮಂಗಳೂರು ಕಡೆಗೆ ಬೋಗಿಗಳನ್ನು ಸಾಗಿಸಲಾಗಿದೆ.
ಬೋಗಿಗಳ ಜೋಡನೆ ತುಂಡಾಗಿ ರೈಲು ಹಳಿಗೆ ಬಿದ್ದ ಪರಿಣಾಮ ಹಳಿಯ ಅಡಿಭಾಗದ ಕಾಂಕ್ರೆಟ್ ಬೀಮ್‌ಗಳು ತುಂಡಾಗಿದ್ದು, ರೈಲು ಸಂಚಾರಕ್ಕೆ ಇದರಿಂದ ತೊಡಕಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಘಟನೆಯಿಂದ ಯಾವುದೇ ಅಪಾಯ ಸಂಭವಿಸದ ಪರಿಣಾಮ ನಿಟ್ಟುಸಿರು ಬಿಡುವಂತ್ತಾಗಿದೆ. ರೈಲ್ವೆ ಕ್ರಾಸಿಂಗ್ ಬಳಿ ರಸ್ತೆ ಬಂದ್ ಆದ ಪರಿಣಾಮ ಈ ಭಾಗದ ಜನರು ಬಾರೀ ಸಮಸ್ಯೆ ಅನುಭವಿಸುವಂತ್ತಾಗಿದೆ. ಕೆಲಸದಿಂದ ಮನೆಕಡೆ ಸಾಗುತ್ತಿದ್ದ ಮಂದಿ ರಸ್ತೆ ಮುಚ್ಚಿದ ಪರಿಣಾಮ ಸುತ್ತಿ ಬಳಸಿ ಮನೆ ಸೇರುವಂತ್ತಾಗಿದೆ.

Related posts

Leave a Reply