Header Ads
Breaking News

ಬೋಳಾರದ ಎಕೆಜಿ ಭವನದಲ್ಲಿ ಮಹಿಳಾ ದಿನಾಚರಣಾ ಕಾರ್ಯಕ್ರಮ

ಜನವಾದಿ ಮಹಿಳಾ ಸಂಘಟನೆ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಇಂದು ಮಂಗಳೂರಿನ ಬೋಳಾರದ ಎಕೆಜಿ ಭವನದಲ್ಲಿ ಮಹಿಳಾ ದಿನಾಚರಣಾ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷರಾದ ದೇವಿ ಅವರು ಭಾಗವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಸರ್ಕಾರಗಳು ಮಹಿಳಾ ದೌರ್ಜನ್ಯ ತಡೆಗಟ್ಟಲು ಶ್ರಮಿಸುವ ಬದಲು ದೌರ್ಜನ್ಯ ನಡೆಸುವವರಿಗೆ ಬೆಂಬಲ ನೀಡುತ್ತಿದೆ. ಇದಕ್ಕೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಬಾಲಕಿಯನ್ನು ಅತ್ಯಾಚಾರ ನಡೆಸಿ ಕೊಂದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ರಾತ್ರೋರಾತ್ರಿ ಆಕೆಯ ಶವ ಸುಟ್ಟು ಹಾಕಿ ನಾಶ ಮಾಡಿದ್ದೇ ಒಂದು ನಿದರ್ಶನ ಎಂದರು. ಜನವಾದಿ ಮಹಿಳಾ ಸಂಘಟನೆ ದುಡಿಯುವ ವರ್ಗದ ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದು ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಘಟನೆ ಕಾರ್ಯನಿರತವಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ದುಡಿಯುವ ಮಹಿಳೆಯರ ಒಕ್ಕೂಟದ ಸಂಚಾಲಕಿ ಪದ್ಮಾವತಿ ಶೆಟ್ಟಿ ವಹಿಸಿದ್ದರು.

ವೇದಿಕೆಯಲ್ಲಿ ಜೆ.ಎಂ.ಎಸ್ ಜಿಲ್ಲಾ ಅಧ್ಯಕ್ಷೆ ಜಯಂತಿ ಬಿ ಶೆಟ್ಟಿ, ಉಪಾಧ್ಯಕ್ಷೆ ರಮಣಿ, ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ್, ಜಿಲ್ಲಾ ನಾಯಕಿ ರಾಧಾ, ಹೇಮಲತಾ, ಶಾಲಿನಿ ವಕೀಲರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ವಿಲಾಸಿನಿ ತೊಕ್ಕೊಟ್ಟು, ಗಿರಿಜಾ, ನಳಿನಾಕ್ಷಿ, ಜಯಲಕ್ಷ್ಮೀ, ಸಿಐಟಿಯು ಮುಖಂಡರಾದ ವಸಂತ್ ಆಚಾರಿ, ಬಾಲಕೃಷ್ಣ ಶೆಟ್ಟಿ, ಬಾಬು ಪಿಲಾರ್, ಡಿವೈಎಫ್ಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *