Header Ads
Breaking News

ಬೋಳಿಯಾರ್ ಅಮರ್ ದೀಪ ಸಭಾಂಗಣದಲ್ಲಿ ಅನುದಾನ ಹಸ್ತಾಂತರ ಕಾರ್ಯಕ್ರಮ

ಮೈಸೂರು ಇಂಡಸ್ಟ್ರೀಸ್ ಸಂಸ್ಥೆಯ ಲಾಭದ ಹಣ ತಮ್ಮ ಕ್ಷೇತ್ರಕ್ಕೂ ತಂದು ಅಭಿವೃದ್ಧಿಗೆ ಬಳಸಲು ಸಾಧ್ಯ ಎಂದು ತೋರಿಸುವ ಜೊತೆಗೆ ತಾನು ಕಲಿತ ಎಲ್ಲ ಶಾಲೆಗಳು, ಸೇವಾಶ್ರಮಕ್ಕೆ ನೀಡುವ ಮೂಲಕ ಅಧ್ಯಕ್ಷ ಸಂತೋಷ್ ಕುಮಾರ್ ಸಾಮಾಜಿಕ ಬದ್ಧತೆ ತೋರ್ಪಡಿಸಿದ್ದಾರೆ ಎಂದು ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಟಿ.ಜಿ.ರಾಜಾರಾಂ ಭಟ್ ಅಭಿಪ್ರಾಯಪಟ್ಟರು.ಬೋಳಿಯಾರ್ ಅಮರ್ ದೀಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮೈಸೂರು ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಿಆರ್ ಎಸ್ ನಿಧಿಯಿಂದ ಬಿಡುಗಡೆಗೊಳಿಸಲಾದ 25 ಲಕ್ಷ ಅನುದಾನ ಮಂಗಳೂರು ಕ್ಷೇತ್ರದ 12 ಶಾಲೆಗಳು ಮತ್ತು ಎರಡು ಸೇವಾಶ್ರಮಗಳಿಗೆ ಹಸ್ತಾಂತರಿಸಿ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತನಾಡಿ, ಇದುವರೆಗೆ ಎಂಇಇಎಲ್ ಮತ್ತು ಕಿಯೋನಿಕ್ಸ್ ಸಂಸ್ಥೆಗೆ ಶಾಸಕರೇ ಅಧ್ಯಕ್ಷರಾಗುತ್ತಿದ್ದರೆ ಬಿಜೆಪಿ ಆಡಳಿತ ಪ್ರಥಮ ಬಾರಿಗೆ ಪಕ್ಷದ ಕಾರ್ಯಕರ್ತರಿಗೆ ನೀಡಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಂಇಇಎಲ್ ಅಧ್ಯಕ್ಷ ಸಂತೋಷ್  ಕುಮಾರ್ ರೈ ಬೋಳಿಯಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಶಾಂತ ಗಟ್ಟಿ, ಪಜೀರ್ ಚರ್ಚ್ ಧರ್ಮಗುರು ಸುನಿಲ್ ವೇಗಸ್, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *