Header Ads
Header Ads
Breaking News

ಬೋಳೂರಿನ ಅಮೃತ ವಿದ್ಯಾಲಯಂನ ಶಾಲಾ ವಾರ್ಷಿಕೋತ್ಸವ

ಮಂಗಳೂರಿನ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ನಗರದ ಬೋಳೂರಿನ ಅಮೃತ ವಿದ್ಯಾಲಯಂನ ಶಾಲಾ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯಿತು. ಈ ವೇಳೆ ವಿಧ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲಾರನ್ನ ಮನರಂಜಿಸಿತ್ತು.

ಮಂಗಳೂರಿನ ಬೋಳೂರಿನ ಅಮೃತ ವಿದ್ಯಾಲಯಂ ಶಾಲಾ ವಾರ್ಷಿಕೋತ್ಸವ ಸಂಭ್ರಮದಿಂದ ಜರುಗಿತ್ತು. ಇನ್ನು ಕಾರ್ಯಕ್ರಮವನ್ನ ಬೆಂಗಳೂರು ಹಾಗೂ ತುಮಕೂರಿನಶ್ರೀ ಸಿದ್ಧಾರ್ಥ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಪಿ.ಬಾಲಕೃಷ್ಣ ಶೆಟ್ಟಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಇನ್ನಿತರರು ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನ ತೋರ್ಪಡಿಸಿಕೊಳ್ಳಬೇಕು. ಉತ್ತಮ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಯನ್ನ ಪಡೆದುಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ರು.

ಮಠದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಅವರು ಮಾತನಾಡಿ, ಉತ್ತಮ ಶಿಕ್ಷಣಕ್ಕೆ ಹೆಸರು ಪಡೆದಿರುವ ಸಂಸ್ಥೆಯಾಗಿದೆ ಎಂದು ಅವರು ಹೇಳಿದರು.

ಇನ್ನೂ ವಿದ್ಯಾರ್ಥಿಗಳಿಗೆ ಗಣ್ಯರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದ್ರು. ಇದೇ ವೇಳೆ ಶಾಲಾ ಶೈಕ್ಷಣಿಕ ವರದಿಯನ್ನ ಉಪಪ್ರಾಂಶುಪಾಲೆ ಅನುಪಮಾ ರಾವ್ ಮಂಡಿಸಿದರು. ಅತಿಥಿಗಳನ್ನ ಶಾಲಾ ಪ್ರಾಂಶುಪಾಲರಾದ ರಾಮಚಂದ್ರ ಭಟ್ ಸ್ವಾಗತಿಸಿದರು.ಈ ವೇಳೆ ಮಾತಾ ಅಮೃತಮಯಿಮಠದ ಅಧ್ಯಕ್ಷ ರಾದ ಡಾ.ಸನ್ನತ್ ಕುಮಾರ್ ಹೆಗ್ಡೆ, ಗೌರವ ಅಧ್ಯಕ್ಷರಾದ ಶೃತಿ ಹೆಗ್ಡೆ, ವಾಮನ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು. ಈ ವೇಳೆ ವಿದ್ಯಾರ್ಥಿಗಳ ಸಾಂಸ್ಕೃತಿಕ ನಡೆದವು.

Related posts

Leave a Reply