Header Ads
Header Ads
Breaking News

ಬೋಳೂರಿನ ಅಮೃತ ವಿದ್ಯಾಲಯಂ ವಿದ್ಯಾರ್ಥಿಗಳು. ಶ್ರೀ ಶರವು ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ.

ಮಂಗಳೂರಿನ ಬೋಳೂರಿನ ಅಮೃತ ವಿದ್ಯಾಲಯಂ ವಿದ್ಯಾರ್ಥಿಗಳು ಶ್ರೀ ಶರವು ಮಹಾಗಣಪತಿ ದೇವಸ್ಥಾನಕ್ಕೆ ತೆರಳಿ ದೇವಸ್ಥಾನದ ಆವರಣದಲ್ಲಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡರು.ಮಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲೊಂದಾದ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂನವರು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಭಜನೆ ದೇವರನ್ನು ತಲುಪುವ ಸುಲಭ ವಿಧಾನ ಎನ್ನುವುದು ಸನಾತನ ಹಿಂದೂ ಧರ್ಮದಲ್ಲಿ ಜನಜನಿತ ಹಾಗಯೇ ಈ ಶಾಲೆಯ ವಿದ್ಯಾರ್ಥಿಗಳು ತಿಂಗಳಿಗೊಮ್ಮೆ ಬೇರೆ ಬೇರೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ. 

 ಈ ಬಾರಿ ಇಲ್ಲಿನ ವಿದ್ಯಾರ್ಥಿಗಳು ನಗರದ ಪುರಾತನ ಹಾಗೂ ಸಕಲ ವಿಘ್ನವಿನಾಶಕನಾದ ಶ್ರೀ ಶರವು ಮಹಾಗಣಪತಿ ದೇವಸ್ಥಾನಕ್ಕೆ ಬೇಟಿ ನೀಡಿ ಅಲ್ಲಿ ದೇವಸ್ಥಾನದ ಆವರಣದಲ್ಲಿ ಕೆಲ ಸಮಯ ಭಜನೆಯನ್ನು ಮಾಡಿದರು.ಈ ಸಂದರ್ಭ ಶರವು ದೇವಸ್ಥಾನದ ಮುಖ್ಯಸ್ಥರಾದ ರಾಹುಲ್ ಶಾಸ್ತ್ರಿ ಕಾರ್ಯಕ್ರಮನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ದೇವಸ್ಥಾನದ ಇತಿಹಾಸದ ಬಗ್ಗೆ ಮಕ್ಕಳಿಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಅಮೃತ ವಿದ್ಯಾಲಯಂನ ಉಪ ಪ್ರಾಂಶುಪಾಲೆ ಅನುಪಮಾ ರಾವ್, ಅಮೃತ ವಿದ್ಯಾಲಯಂ ಸೇವಾ ಸಮಿತಿಯ ಉಪಾಧ್ಯಕ್ಷ ಡಾ.ವಸಂತ್ ಕುಮಾರ್ ಪೆರ್ಲ, ವಿದ್ಯಾರ್ಥಿಗಳು,ಅದ್ಯಾಪಕರು ಪೋಷಕರು,ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply