Breaking News

ಬ್ಯಾಂಕಾಕ್ ಏಶಿಯನ್ ಯುವ ಅಥ್ಲೆಟಿಕ್ಸ್, ಭಾರತದ ಮೆಡ್ಲೆ ರಿಲೆ ತಂಡಕ್ಕೆ ಚಿನ್ನ

ಟ್ರ್ಯಾಕ್ನಲ್ಲಿ ಮಿಂಚು ಹರಿಸಿದ ಭಾರತದ ಮೆಡ್ಲೆ ರಿಲೇ ತಂಡದವರು ಬ್ಯಾಂಕಾಕ್ ಇಲ್ಲಿ ಮುಕ್ತಾಯಗೊಂಡ ಏಷ್ಯನ್ ಯುವ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದರು.
ಗುರಿಂದರ್ವೀರ್ ಸಿಂಗ್, ಪಾಲೇಂದರ್ ಕುಮಾರ್, ಮನೀಶ್ ಮತ್ತು ಅಕ್ಷಯ್ ನಾಯ್ನ್ ಅವರನ್ನು ಒಳಗೊಂಡ ತಂಡ ೧:೫೫.೬೨ ಸೆಕೆಂಡುಗಳಲ್ಲಿ ಗುರಿ ತಲುಪಿ ಚೀನಾ ತೈಪೆಯನ್ನು ೧:೫೫.೭೧ ಸೆಕೆಂಡು ಹಿಂದಿಕ್ಕಿದರು. ಹಾಂಕಾಂಗ್ ತಂಡದವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಬಾಲಕರ ವಿಭಾಗದ ಜಾವೆಲಿನ್ ಥ್ರೋ ಸ್ಪರ್ಧೆಯ ಬೆಳ್ಳಿ ಮತ್ತು ಕಂಚಿನ ಪದಕವನ್ನು ಭಾರತದ ಅಥ್ಲೀಟ್ಗಳು ಗೆದ್ದರು. ಉತ್ತರ ಪ್ರದೇಶದ ರೋಹಿತ್ ಯಾದವ್ ೭೪.೩೦ ಮೀಟರ್ಸ್ ಮತ್ತು ಅವಿನಾಶ್ ಯಾದವ್ ೭೦.೦೯ ಮೀ ಕ್ರಮವಾಗಿ ಈ ಸಾಧನೆ ಮಾಡಿದರು.
ಈ ಮೂಲಕ ಭಾರತ ತಲಾ ಐದು ಚಿನ್ನ ಮತ್ತು ಬೆಳ್ಳಿ, ನಾಲ್ಕು ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿತು. ೧೬ ಚಿನ್ನ, ಒಂಬತ್ತು ಬೆಳ್ಳಿ ಮತ್ತು ಐದು ಕಂಚಿನ ಪದಕ ಗೆದ್ದ ಚೀನಾ ಪ್ರಥಮ ಸ್ಥಾನ ಗಳಿಸಿದರೆ, ಆರು ಚಿನ್ನ, ಏಳು ಬೆಳ್ಳಿ ಮತ್ತು ಎರಡು ಕಂಚು ಗೆದ್ದ ಚೀನಾ ತೈಪೆ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿತು.

Related posts

Leave a Reply