Header Ads
Header Ads
Header Ads
Breaking News

ಬ್ಯಾಂಕ್ ಉದ್ಯೋಗದ ಮಹಾನ್ ವ್ಯಕ್ತಿ ಸುಂದರರಾಮ ಶೆಟ್ಟಿ ಮುಲ್ಕಿಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ ಅಭಿಪ್ರಾಯ

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಬ್ಯಾಂಕ್ ನಲ್ಲಿ ಉದ್ಯೋಗ ನೀಡಿದ ಮಹಾನ್ ವ್ಯಕ್ತಿಯಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿನ ಮನೆಗಳ ದೀಪ ಬೇಳಗಿಸಿದವರು ಮೂಲ್ಕಿ ಸುಂದರ ರಾಮ ಶೆಟ್ಟಿಯವರು ಎಂದು ಮಾಜಿ ಸಚಿವ ಕೆ ಅಮರನಾಥ ಶೆಟ್ಟಿಯವರು ಹೇಳಿದರು.

ಅವರು ಮೂಲ್ಕಿಯ ಬಂಟರ ಸಂಘದ ಆಶ್ರಯದಲ್ಲಿ ಮೂಲ್ಕಿಯ ಕಾರ್ನಾಡಿನ ಬಂಟರ ಸಭಾಭವನದಲ್ಲಿ ನಡೆದ ೨೦೧೭-೧೮ ರ ಸಾಲಿನ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಮೂಲ್ಕಿ ಸುಂದರ ರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ, ಸಾಧಕರಿಗೆ ಸನ್ಮಾನ ಮತ್ತು ಬೆಂಗಳೂರು ಬಂಟರ ಸಂಘದ ಪ್ರಾಯೋಜಕತ್ವದಲ್ಲಿ ಜೀವನಕ್ಕಾಗಿ ಕಾಮಧೇನು ಅನುದಾನ ಬಿಡುಗಡೆ ಸಮಾರಂಭದಲ್ಲಿ ಮೂಲ್ಕಿ ಸುಂದರರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ಪ್ರತಿಷ್ಟಿತ ೨೦೧೭ ರ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ನಿಟ್ಟೆ ಶಿಕ್ಷಣ ಸಂಸ್ಥೆ ನಿಟ್ಟೆ ವಿ.ವಿಯ ಕುಲಪತಿ ಡಾ ಎನ್ ವಿನಯ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮಾಜ ಸೇವೆಯಲ್ಲಿನ ಸಂಜೀವ ಕೊರಗ ಶೆಟ್ಟಿ ಶಿಮಂತೂರು, ಯೋಗ ಗುರು ಜಯ ಮುದ್ದು ಶೆಟ್ಟಿ ಕಿಲ್ಪಾಡಿ, ಕೃಷಿ ಕ್ಷೇತ್ರದ ಬಾಸ್ಕರ ಶೆಟ್ಟಿ ಸಂಕಲಕರಿಯ ಮುಂಡ್ಕೂರು ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಹಿಮಾಂಶೂ ಹೆಗ್ಡೆ ಹಳೆಯಂಗಡಿ, ಅಕ್ಷಯ ಶೆಟ್ಟಿ ಕಾರ್ನಾಡು, ಹೃತಿಕ್ ಶೆಟ್ಟಿ ಪೊಸ್ರಾಲ್ ಮತ್ತು ಕುಮಾರಿ ಶ್ರೀನಿಧಿ ಮುಂಡ್ಕೂರುರನ್ನು ಸನ್ಮಾನಿಸಲಾಯಿತು. ಬೆಂಗಳೂರು ಬಂಟರ ಸಂಘದ ಸಮಾಜ ಸೇವಾ ವಿಭಾಗದ ಚೇರ್ ಮೆನ್ ರಾಧಾಕೃಷ್ಣ ಶೆಟ್ಟಿ,ಮುಂಡ್ಕೂರು ವಿದ್ಯಾವಧಕ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಮುಂಬ್ಯೆನ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಳೆಪಾಡಿ, ಉದ್ಯಮಿ ರತ್ನಾಕರ ಶೆಟ್ಟಿ ಮುಂಡ್ಕೂರು ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದು ಪ್ರಕಾಶ್ಚಂದ್ರ ಭಂಡಾರಿ, ಮುಲ್ಕಿ ಬಂಟರ ಸಂಘದ ಕೆ ರವಿರಾಜ ಶೆಟ್ಟಿ ಪುರುಷೋತ್ತಮ ಶೆಟ್ಟಿ, ಸಾಯಿನಾಥ ಶೆಟ್ಟಿ ವ, ಪುರುಷೋತ್ತಮ ಶೆಟ್ಟಿ, ಸುಂದರ ಶೆಟ್ಟಿ, ಮಲ್ಲಿಕಾ ಪೂಂಜ, ರಾಜೇಶ್ ಕುಮಾರ್ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ಬಬಿತಾ ಯು ಶೆಟ್ಟಿ, ಪತ್ರಿಕಾ ಮತ್ತು ಪ್ರಚಾರ ವಿಭಾಗದ ಸಂಚಾಲಕ ಶರತ್ ಶೆಟ್ಟಿ, ಮತ್ತಿತರರು ಇದ್ದರು.
ವರದಿ: ನಿಶಾಂತ್ ಮುಲ್ಕಿ

Related posts

Leave a Reply