Header Ads
Breaking News

ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ

ಸಾರ್ವಜನಿಕ ರಂಗದ ಎರಡು ಬ್ಯಾಂಕ್ ಮತ್ತು ಒಂದು ವಿಮಾ ಕಂಪೆನಿಯನ್ನು ಖಾಸಗೀಕರಣಗೊಳಿಸಲು 2021ರ ಕೇಂದ್ರ ಬಜೆಟ್‍ನಲ್ಲಿ ಘೋಷಿಸಿರುವುದನ್ನು ಖಂಡಿಸಿ ಸಂಯುಕ್ತ ಬ್ಯಾಂಕ್ ಒಕ್ಕೂಟಗಳ ವೇದಿಕೆ ಕರೆಯಂತೆ ಮಂಗಳೂರಲ್ಲಿ ಬ್ಯಾಂಕ್ ನೌಕರರು ಮುಷ್ಕರ ನಡೆಸಿದ್ದಾರೆ. ಮಂಗಳೂರು ನಗರದ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸುಮಾರು 2 ಸಾವಿರಕ್ಕೂ ಅಧಿಕ ಬ್ಯಾಂಕ್ ನೌಕರರು ಇಂದಿನ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಕೆನರಾ ಬ್ಯಾಂಕ್‍ನ ನಗರದ ಬಲ್ಮಠ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಬ್ಯಾಂಕ್ ನೌಕರರು ಸರಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಮಂಗಳೂರು ಮಿನಿ ವಿಧಾನ ಸೌಧದ ಮುಂದೆಯೂ ಧರಣಿ ನಡೆಸಿದರು.
ಪ್ರತಿಭಟನೆಯಲ್ಲಿ ರಮೇಶ್ ನಾಯಕ್, ಅಮರ್ ಎನ್.ವಿ, ಗಿರೀಶ್ ಕುಮಾರ್, ಸ್ವಾತಿ, ಸುಧೀರ್ ಕುಮಾರ್, ರವಿ ಪಿಂಟೊ, ಹರೀಶ್ ಶೆಟ್ಟಿ. ಆರ್.ಎಸ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *