Header Ads
Breaking News

ಬ್ಯಾಂಕ್ ವಿಲೀನ ಪ್ರಕ್ರೀಯೆಯನ್ನ ವಿರೋಧಿಸಿ ಬ್ಯಾಂಕ್ ಸಂಘಟನೆಗಳಿಂದ ಉಡುಪಿಯಲ್ಲಿ ಪ್ರತಿಭಟನೆ

ಬ್ಯಾಂಕ್ ವಿಲೀನ ಪ್ರಕ್ರೀಯೆಯನ್ನ ವಿರೋಧಿಸಿ ಇಂದು ಉಡುಪಿಯ ಸಿಂಡಿಕೇಟ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರ ಬ್ಯಾಂಕುಗಳ ವಿಲೀನ ಪ್ರಕ್ರೀಯೆಯನ್ನು ಖಂಡಿಸಿ ಸಿಂಡಿಕೇಟ್ ಬ್ಯಾಂಕ್ ಆಫೀಸರ್ಸ್ ಈಗಾಗಲೇ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದೆ. ಇಂದು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಉಡುಪಿ ಸಿಂಡಿಕೇಟ್ ಬ್ಯಾಂಕ್ ಎದುರು ಪ್ರತಿಭಟಿಸಿ ಕೇಂದ್ರದ ವಿಲೀನಿಕರಣವನ್ನು ವಿರೋಧಿಸಲಾಯಿತು. ಕೇಂದ್ರ ಸರಕಾರ ವಿಲೀನ ಪ್ರಕ್ರೀಯೆ ಮೂಲಕ ದೇಶದಲ್ಲಿ ಅರಾಜಕತೆ ನಿರ್ಮಿಸುತ್ತಿದೆ. ಸಿಬ್ಬಂದಿಗಳು ಅತಂತ್ರರಾಗಿದ್ದಾರೆ. ವಿಲೀನದ ಮೂಲಕ ಮುಂದೆ ಬ್ಯಾಂಕಿಂಗ್ ಕ್ಷೇತ್ರದ ಭವಿಷ್ಯ ತೂಗುಉಯ್ಯಾಲೆಯಲ್ಲಿದೆ. ಆದಷ್ಟು ಬೇಗ ಸರಕಾರ ಈ ಪ್ರಕ್ರೀಯೆಯನ್ನ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Related posts

Leave a Reply

Your email address will not be published. Required fields are marked *