Header Ads
Header Ads
Header Ads
Breaking News

ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಬಹುಮಾನ ವಿತರಣೆ ಮಂಗಳೂರಿನ ಓಶಿಯನ್ ಪರ್ಲ್‌ನಲ್ಲಿ ಕಾರ್ಯಕ್ರಮ

ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್‍ಸ್ ಅಸೋಸಿಯೇಶನ್ ಹಾಗೂ ಬ್ಯಾರೀಸ್ ಚೇಂಬರ್‍ಸ್ ಆಪ್ ಕಾಮರ್‍ಸ್ ಆಂಡ್ ಇಂಡಸ್ಟ್ರೀ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಬಹುಮಾನ ವಿತರಣಾ ಕಾರ್ಯಕ್ರಮ ಮಂಗಳೂರಿನ ಓಶಿಯನ್ ಪರ್ಲ್‌ನಲ್ಲಿ ನಡೆಯಿತು.

ಓಶಿಯನ್ ಪರ್ಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೂರ್ನಮೆಂಟ್‌ನ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಶ್ರೀದೇವಿ ಇನ್ಸ್‌ಸ್ಟಿಟ್ಯೂಟ್‌ನ ಚೇರ್‌ಮೆನ್ ಎ ಸದಾನಂದ ಶೆಟ್ಟಿಯವನ್ನು ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್‍ಸ್ ಅಸೋಸಿಯೇಶನ್ ಹಾಗೂ ಬ್ಯಾರೀಸ್ ಚೇಂಬರ್‍ಸ್ ಆಪ್ ಕಾಮರ್‍ಸ್ ಆಂಡ್ ಇಂಡಸ್ಟ್ರೀ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಬ್ಯಾರೀಸ್‌ನವರಿಂದ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಲ್ಲದೆ ಕ್ರೀಡಾಪಟುಗಳನ್ನು ಸನ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲೂ ಬ್ಯಾರೀಸ್‌ನವರು ಕ್ರೀಡಾ ಸೇವೆಗಾಗಿ ಉತ್ತಮ ಕಾರ್ಯಕ್ರಮಗ್ಳನ್ನು ಹಮ್ಮಿಕೊಳ್ಳಲಿ ಎಂದು ಹೇಳಿದರು.

ಈ ಸಂದರ್ಭ ಅಹಮ್ಮದ್ ರಶೀದ್, ಶ್ರೀನಿವಾಸ್ ಕಾಮತ್, ಡಾ. ಅಬ್ದುಲ್ ಮಜೀದ್, ಶಾಸಕ ಮೊಯ್ದಿನ್ ಬಾವಾ, ಅಬ್ದುಲ್ ರಶೀದ್, ಮಹಮ್ಮದ್ ನಿಸಾರ್, ಅಬ್ದುಲ್ ರತೀಫ್, ನೂರ್ ಮಹಮ್ಮದ್ ಉಪಸ್ಥಿತರಿದ್ದರು.

ವರದಿ: ನಾಗರಾಜ್ ಮಂಗಳೂರು

Related posts

Leave a Reply