Header Ads
Header Ads
Breaking News

ಬ್ಯಾರಿಕೇಡ್‌ನ್ನು ಹೊಳೆಗೆ ಎಸೆದ ಕಿಡಿಗೇಡಿಗಳು : ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ ಸ್ಥಳೀಯರು

ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಹಾಗೂ ಅಪಘಾತ ತಡೆಯುವ ಉದ್ದೇಶದಿಂದ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಚಾಂಪಿಯನ್ ಲೀಗ್ ಸಂಘಟನೆ ವತಿಯಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಹಾಕಲಾಗಿದ್ದ ಬ್ಯಾರಿಕೇಡ್ ಅನ್ನು ಕಿಡಿಗೇಡಿಗಳ ತಂಡ ಹೊಳೆಗೆ ಎಸೆದ ಘಟನೆ ನಡೆದಿದೆ. ವಿಟ್ಲ ಸಾಲೆತ್ತೂರು ರಸ್ತೆಯ ಕೊಡಂಗಾಯಿ ಭಾಗದಲ್ಲಿ ಹೆಚ್ಚು ಅಪಘಾತ ನಡೆಯುತ್ತಿದ್ದ ಬಗ್ಗೆ ಎಚ್ಚೆತ್ತ ಸಂಘಟನೆ ಈ ಕಾರ್ಯಕ್ಕೆ ಮುಂದಾಗಿತ್ತು. ಇದೀಗ ಅದನ್ನು ಕಿಡಿಗೇಡಿಗಳು ನಾಶಪಡಿಸಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Related posts

Leave a Reply