Header Ads
Breaking News

ಬ್ಯಾರಿ ಅಕಾಡೆಮಿಯ ಕಚೇರಿ, ಸಾಂಸ್ಕೃತಿಕ ಭವನದ ಶಿಲಾನ್ಯಾಸ ಕಾರ್ಯಕ್ರಮ ಕಾರಣಾಂತರದಿಂದ ಮುಂದೂಡಿಕೆ

ಜನವರಿ 1ರಂದು ತೊಕ್ಕೊಟ್ಟು ಸಮೀಪದ ನಡೆಯಲಿರುವ ನೂತನ ಬ್ಯಾರಿ ಅಕಾಡಮಿಯ ಕಚೇರಿ ಹಾಗೂ ಸಾಂಸ್ಕೃತಿಕ ಭವನದ ಶಿಲಾನ್ಯಾಸ ಕಾರ್ಯಕ್ರಮವನ್ನು ಕಾರಣಾಂತರದಿಂದ ಮುಂದೂಡಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.

ಅವರು ಮಂಗಳೂರಿನ ಅಕಾಡಮಿಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಬ್ಬಕ್ಕ ಭವನಕ್ಕೆ ಮೀಸಲಾದ ಜಾಗದಲ್ಲಿ ತನ್ನ ಒಪ್ಪಿಗೆಯ ಮೇರೆಗೆ ಬ್ಯಾರಿ ಅಕಾಡಮಿಯ ಸಾಂಸ್ಕೃತಿಕ ಭವನ ನಿರ್ಮಾಣವಾಗಲಿದೆ ಎಂದು ಸ್ಥಳೀಯ ಶಾಸಕ ಯು.ಟಿ.ಖಾದರ್ ಪತ್ರಿಕೆಯೊಂದಕ್ಕೆ ನೀಡಿದ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಅಬ್ಬಕ್ಕ ಅಭಿಮಾನಿಗಳು ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಶಾಸಕರ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗಿರುತ್ತದೆ ಎಂದು ಆಪಾದಿಸಿದ್ದಾರೆ.

ಸುಮಾರು ಹತ್ತು ವರ್ಷಗಳಿಂದ ಅಬ್ಬಕ್ಕ ಭವನಕ್ಕೆ ಕಾದಿರಿಸಲಾದ ಜಾಗದಲ್ಲಿ ಈ ತನಕ ಅಬ್ಬಕ್ಕ ಭವನ ನಿರ್ಮಿಸದೆ ಪಕ್ಕದಲ್ಲಿ ಅಕಾಡಮಿಯ ಸಾಂಸ್ಕೃತಿಕ ಭವನ ತಲೆ ಎತ್ತುತ್ತಿರುವುದರಿಂದ ಕೆಲವರಿಗೆ ಅಸಮಾಧಾನವಾಗಿದ್ದು ಜನವರಿ 1ರಂದು ಮೌನ ಪ್ರತಿಭಟನೆಯನ್ನು ಅಬ್ಬಕ್ಕ ಸಮಿತಿ ಹಾಗೂ ಸ್ಥಳೀಯ ಸಂಘ ಸಂಸ್ಥೆ ಹಮ್ಮಿಕೊಂಡಿರುವ ಬಗ್ಗೆ ಮಾಹಿತಿ ಇದೆ .ಯಾವುದೇ ಸಮಾಜಕ್ಕೆ ನೋವನ್ನುಂಟು ಮಾಡಿ ಶಿಲಾನ್ಯಾಸ ಕಾರ್ಯಕ್ರಮ ನಡೆಸುವುದು ಸಮಂಜಸವಲ್ಲ ಎಂದು ಭಾವಿಸಿ ಎಲ್ಲರ ಮನ ಒಲಿಸಿ ಅಬ್ಬಕ್ಜ ಭವನಕ್ಕೂ ನ್ಯಾಯ ಒದಗಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿ ಅಕಾಡಮಿಯ ಶಿಲಾನ್ಯಾಸ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ರಹೀಂ ಉಚ್ಚಿಲ್ ಸ್ಪಷ್ಟಪಡಿಸಿದರು.

ಮೂರನೇ ಅಂತಸ್ತಿನಲ್ಲಿ ಗ್ರಾಮಕರಣಿಕರ ಹಾಗೂ ಸರ್ವೇಯರ್ ಕಚೇರಿ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರು ನೀಲ ನಕ್ಷೆಯನ್ನು ವೀಕ್ಷಿಸಬಹುದಾಗಿದೆ. ಹೀಗಿದ್ದರೂ ಅಕಾಡಮಿಯ ಭವನ ಜನರನ್ನು ಕಲೆ ಸಾಹಿತ್ಯದ ಹೆಸರಲ್ಲಿ ಒಗ್ಗೂಡಿಸುವ ಭವನವಾಗಬೇಕೇ ಹೊರತು ಬೇರ್ಪಡಿಸುವ ಭವನವಾಗಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿ ಎಲ್ಲರ ಸಹಕಾರದೊಂದಿಗೆ ಮುಂದಿನ ದಿನದಲ್ಲಿ ನಿರ್ಮಾಣವಾಗಲಿದ್ದು, ಎಲ್ಲ ಗೊಂದಲ ಹಾಗೂ ಸಂಶಯಗಳಿಗೆ ಶಾಶ್ವತ ತೆರೆ ಎಳೆಯಲಾಗುವುದು ಎಂದು ರಹೀಂ ಉಚ್ಚಿಲ್ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯರಾದ ರೂಪಾಶ್ರೀ ವರ್ಕಾಡಿ, ರೂಪೇಶ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *