Header Ads
Header Ads
Header Ads
Breaking News

ಬ್ಯಾರಿ ಸಾಹಿತ್ಯ-ಸಂಸ್ಕೃತಿ ಉಳಿವಿಗೆ ‘ಮೇಲ್ತೆನೆ’ ಯಿಂದ ಮನೆ ಮನೆ ಸಾಹಿತ್ಯ

ಉಳ್ಳಾಲ: ಬ್ಯಾರಿ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಅದನ್ನು ಮುನ್ನಡೆಸುವ ಉದ್ದೇಶದೊಂದಿಗೆ ಬ್ಯಾರಿ ಬರಹಗಾರರು ಹಾಗೂ ಕಲಾವಿದರ ಒಗ್ಗೂಡುವಿಕೆಯಲ್ಲಿ ಆರಂಭಗೊಂಡಿರುವ ‘ ಮೇಲ್ತೆನೆ’ ಸಂಘಟನೆ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಕಳೆದ ಆರು ತಿಂಗಳಿನಿಂದ ‘ಮನೆ ಮನೆ ಸಾಹಿತ್ಯ ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಬ್ಯಾರಿ ಭಾಷೆ ಕುರಿತ ಸದಸ್ಯರುಗಳಿಂದ ಆರು ಪ್ರಬಂಧಗಳನ್ನು ಮಂಡಿಸಿದೆ.

ರಾಜಕೀಯ ಉದ್ದೇಶಗಳಿಲ್ಲದೆ ಬ್ಯಾರಿ ಸಮುದಾಯದ, ಭಾಷೆಯ ಒಳಿತಿಗಾಗಿ ಆರಂಭ ಕಂಡಿರುವ ಸಂಘಟನೆ ಕಳೆದ ೬ ತಿಂಗಳಿನಿಂದ ಮನೆ ಮನೆ ಸಾಹಿತ್ಯ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ವೇಳೆ ಮಂಡಿಸಲಾದ ಪ್ರಬಂಧಗಳು ಎಲ್ಲವೂ ಭಿನ್ನವಾಗಿದೆ. ನಿಯಾಝ್ ಎಂಬವರಿಂದ ‘ ಕಾಲೇಜುಗಳಲ್ಲಿ ಬ್ಯಾರಿ ಭಾಷೆ’ , ಇಸ್ಮಾಯಿಲ್ ಎಂಬವರಿಂದ ‘ ಶೈಕ್ಷಣಿಕ ಕ್ಷೇತ್ರದಲ್ಲಿ ಬ್ಯಾರಿ ಭಾಷೆ’, ಆಲಿಕುಂಞಿ ಪಾರೆಯವರ ‘ಬ್ಯಾರಿ ಸಂಸ್ಕೃತಿ ’ , ಆರೀಫ್ ಕಲ್ಕಟ್ಟ ಇವರಿಂದ ‘ ಸೋಷಿಂiiಲ್ ಮೀಡಿಯಾದಲ್ಲಿ ಬ್ಯಾರಿ ಭಾಷೆ ಬಳಸುವಿಕೆ’ , ಇಸ್ಮತ್ ಫಜೀರ್ ಇವರ ‘ ಬ್ಯಾರಿ ಭಾಷೆಯ ಪ್ರಬೇಧಗಳು, ಬ್ಯಾರಿ ಭಾಷೆಗೆ ಲಿಪಿ ಇತ್ತೇ? ’ ಅನ್ನುವ ಚರ್ಚೆ ಪ್ರಬಂಧ ಹಾಗೂ ಬಶೀರ್ ಕಿನ್ಯಾ ಇವರಿಂದ ‘ ಬ್ಯಾರಿ ಜನಾಂಗದ ಇತಿಹಾಸ’ ವಿಚಾರದ ಕುರಿತು ಈವರೆಗೆ ಪ್ರಬಂಧಗಳನ್ನು ಮಂಡಿಸಲಾಗಿದೆ.

ಎರಡು ವರ್ಷಗಳ ಹಿಂದೆ ಆರಂಭಗೊಂಡ ಬ್ಯಾರಿ ಸಾಹಿತ್ಯ ಆಸಕ್ತರ ಒಕ್ಕೂಟವಾದ ‘ ಮೇಲ್ತೆನೆ’ ಆರಂಭಗೊಂಡಿದೆ. ಕಲಾವಿದರು ಮತ್ತು ಸಾಹಿತ್ಯ ಆಸಕ್ತರನ್ನು ಒಟ್ಟುಗೂಡಿಸಿ

ವಿವಿಧ ರೀತಿಯಲ್ಲಿ ಬ್ಯಾರಿ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ಮೇಲ್ತೆನೆ ಮೂಲಕ ನಡೆಸಲಾಗಿದೆ. ಬ್ಯಾರಿ ಭಾಷೆಗೆ ಸಂಬಂಧಿಸಿದ ಕವಿಗೋಷ್ಠಿ, ಕಮ್ಮಟ ಹಾಗೂ ರಸಪ್ರಶ್ನೆಗಳು ನಡೆದಿವೆ. ಬ್ಯಾರಿ ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿರುವ ಕಾಲೇಜುಗಳು, ಶಾಲೆಗಳಿಗೆ ಮೇಲ್ತೆನೆ ಸದಸ್ಯರು ತೆರಳಿ ರಾಷ್ಟ್ರೀಯ ಸೇವಾ ಯೋಜನೆ ಸಹಕಾರದೊಂದಿಗೆ ಬ್ಯಾರಿ ಸಾಹಿತ್ಯ ಬೆಳೆದು ಬಂದ ರೀತಿ ಮತ್ತು ಬ್ಯಾರಿ ಸಾಹಿತ್ಯ ಯಾಕೆ ಬೇಕು? ಅನ್ನುವ ಭಾಷೆ ಉಳಿಸುವ ಮತ್ತು ಬೆಳೆಸುವ ಜಾಗೃತಿಯನ್ನು ಮೂಡಿಸಲಾಗಿದೆ. ಎಂಬುದು ಸದಸ್ಯ ಇಸ್ಮತ್ ಫಜೀರ್ ಅವರ ಅಭಿಪ್ರಾಯವಾಗಿದೆ.


ಕಳೆದ ಆರು ತಿಂಗಳಿನಿಂದ ಪ್ರತಿ ಸದಸ್ಯರ ಮನೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ತಿಂಗಳಿಗೊಮ್ಮೆ ಸೇರಿಕೊಂಡು ಸಾಹಿತ್ಯದ ಬಗ್ಗೆ ಚರ್ಚೆ ಹಾಗೂ ಸದಸ್ಯರಿಂದ ಪ್ರಬಂಧವನ್ನು ಮಂಡಿಸುವಿಕೆ ನಡೆಯುತ್ತಿದೆ. ಬ್ಯಾರಿ ಭಾಷೆ ಚರ್ಚಿಸಿ, ಭಾಷೆಯನ್ನು ಎಲ್ಲರೂ ಉಪಯೋಗಿಸುವಂತೆ, ಬ್ಯಾರಿ ಸಾಹಿತ್ಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬ್ಯಾರಿ ಭಾಷೆ ಸಂಸ್ಕೃತಿಯ ಕುರಿತು ಚರ್ಚಿಸಿ ವೇಗವನ್ನು ಕೊಡುವ ಪ್ರಯತ್ನದಿಂದ ಮನೆ ಸಾಹಿತ್ಯ ಕಾರ್ಯಕ್ರಮದ ಉದ್ದೇಶವಾಗಿದೆ. ಭಾನುವಾರ ಅಸೈಗೋಳಿಯಲ್ಲಿರುವ ಯೆನೆಪೋಯ ಕಾಲೇಜಿನ ಉಪನ್ಯಾಸಕ ನಿಯಾಝ್ ಅವರ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆ- ಕಾಲೇಜುಗಳಲ್ಲಿ ಬ್ಯಾರಿ ಭಾಷೆಯ ಕುರಿತು ಪ್ರೋತ್ಸಾಹ ನೀಡುವ ಕುರಿತ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಅ.೩ ರಂದು ಬ್ಯಾರಿ ಭಾಷಾ ದಿನದಂದು ಕಾರ್ಯಕ್ರಮವನ್ನು ನಡೆಸುವ ಉದ್ದೇಶವನ್ನು ಸಂಘಟನೆ ಹಮ್ಮಿಕೊಂಡಿದೆ ಎಂದು ‘ಮೇಲ್ತೆನೆ’ ಸಂಘಟನೆಯ ಅಧ್ಯಕ್ಷ ಆಲಿಕುಂಞಿ ಪಾರೆ ತಿಳಿಸಿದರು.

ಈ ಸಂದರ್ಭ ಮೇಲ್ತೆನೆಯ ಪದಾಧಿಕಾರಿಗಳಾದ ಇಸ್ಮಾಯೀಲ್ ಟಿ., ಇಸ್ಮತ್ ಪಜೀರ್, ಬಶೀರ್ ಕಲ್ಕಟ್ಟ, ಸದಸ್ಯರಾದ ಹಂಝ ಮಲಾರ್, ಬಶೀರ್ ಅಹ್ಮದ್ ಕಿನ್ಯ, ರಫೀಕ್ ಪಾಣೇಲ, ಅರೀಫ್ ಕಲ್ಕಟ್ಟ ಉಪಸ್ಥಿತರಿದ್ದರು.

Related posts

Leave a Reply