Header Ads
Header Ads
Header Ads
Breaking News

ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಉಡುಪಿ ಜಿಲ್ಲಾಡಳಿತದಿಂದ ಆಚರಣೆ

ಉಡುಪಿ ಜಿಲ್ಲಾಳಡಳಿತ ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿಯನ್ನು ಅಚರಿಸಲಾಯಿತು.
ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು. ನಾರಾಯಣಗುರು ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡಿ ಪುಷ್ಪ ನಮನವನ್ನು ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಇಡೀ ವಿಶ್ವಕ್ಕೆ ಶಾಂತಿ ಮತ್ತು ಸಮಾನತೆಯ ತತ್ವವನ್ನು ಸಾರಿದ ನಾರಯಣ ಗುರುಗಳ ಜಂಯಂತಿಯನ್ನು ಕಳೆದ ವರ್ಷದಿಂದ ಸರಕಾರಿ ಕಾರ್ಯಕ್ರಮವಾಗಿ ಆಯೋಜಿಸಲಾಗುತ್ತಿದೆ. ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ತತ್ವವನ್ನು ನಾರಾಯಣ ಗುರುಗಳು ಜಗತ್ತಿಗೆ ಸಾರಿದ್ದಾರೆ. ಅವರ ತತ್ವ ಆದರ್ಶಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಕೇರಳದಲ್ಲಿ ಕೆಳ ಜಾತಿಯವರಿಗೆ ದೇವಸ್ಥಾನಗಳಿಗೆ ಪ್ರವೇಶ ನೀಡದೇ ಇದ್ದ ಸಂದರ್ಭದಲ್ಲಿ ಸಮಾನತೆಗಾಗಿ ಕ್ರಾಂತಿಯನ್ನು ಮಾಡಿದವರು ನಾರಾಯಣ ಗುರುಗಳು. ಸ್ವತಂತ್ರಕ್ಕಾಗಿ ಸ್ವತಂತ್ರ್ಯ ಸಂಗ್ರಾಮ ನಡೆದರೆ ಸಾಮಾಜಿಕ ಸಮಾನತೆಗಾಗಿ ಸಾಮಾಜಿಕ ಕ್ರಾಂತಿಯನ್ನು ಮಾಡಿ ನಿಮ್ಮ ದೇವರನ್ನು ನೀವು ಆರಾಧಿದಿ ನಮ್ಮ ದೇವರನ್ನು ನಾವು ಆರಾಧಿಸುತ್ತೇವೆ ಎಂದು ಮೇಲವರ್ಗದವರಿಗೆ ಬೀಸಿ ಮುಟ್ಟಿಸಿದವರು ನಾರಾಯಣ ಗುರುಗಳನ್ನು ಎಂದು ಅಭಿಪ್ರಾಯಪಟ್ಟರು .

ವರದಿ:ಪಲ್ಲವಿ ಸಂತೊಷ್

Related posts

Leave a Reply