Header Ads
Breaking News

ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನ ವರ್ಷಾವಧಿ ಉತ್ಸವಕ್ಕೆ ಸಮಾಪ್ತಿ

ಮಂಜೇಶ್ವರ: ಕಳೆದ ಮೂರು ದಿವಸಗಳಿಂದ ನಡೆದು ಬಂದ ಬ್ರಹ್ಮ ಶ್ರೀ ಮುಗೇರ ಮಹಾಕಾಳಿ ದೈವಸ್ಥಾನ ವರ್ಷಾವಧಿ ಉತ್ಸವ ಸಮಾಪ್ತಿಗೊಂಡಿತು. ಶನಿವಾರದಂದು ಗಣಹೋಮದೊಂದಿಗೆ ಆರಂಭ ಗೊಂಡ ಉತ್ಸವ ಇಂದು ಮಧ್ಯಾಹ್ನದ ಕುರಿ ತಂಬಿಲ ಪ್ರಸಾದ ವಿತರಣೆಯೊಂದಿಗೆ ಸಮಾಪ್ತಿಗೊಂಡಿತು. ದೈವಸ್ಥಾನದ ಉತ್ಸವಕ್ಕೆ ವಿವಿಧ ಪ್ರದೇಶಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.

ಶನಿವಾರದಂದು ಗಣಹೋಮ, ಕೊಡಿ ಮುಹೂರ್ತ, ಕೊಡಂದಮಾಯ ನೇಮ, ತಾಲೀಮು ಪ್ರದರ್ಶನ, ಮಹಾಕಾಳಿ ನೇಮೋತ್ಸವ ನಡೆಯಿತು.ಮರುದಿನ ಧರ್ಮ ದೈವ ಗುಳಿಗ ನೇಮ, ಪಂಜುರ್ಲಿ ನೇಮ, ಹಾಗೂ ಬ್ರಹ್ಮ ಶ್ರೀ ಮುಗೇರ ಹಾಗೂ ತನ್ನಿಮಾನಿಗ ದೈವಗಳ ನೇಮ ನಡೆಯಿತು. ಸಮಾರೋಪ ದಿವಸವಾದ ಇಂದು ತನ್ನಿಮಾನಿಗ ದೈವಗಳಿಂದ ಗಂಧ ಪ್ರಸಾದ ಸ್ವೀಕಾರ, ಭಂಡಾರ ಇಳಿಸಿ ಬಳಿಕ ಕರಿತಂಬಿಲ ಪ್ರಸಾದ ವಿತರಣೆ ನಡೆಯಿತು. ಆನಂದ ಮಾಸ್ಯರ್, ಜಯಂತ, ಪುರುಷೋತ್ತಮ, ಮಧು ಮೊದಲಾದವರು ಉತ್ಸವಕ್ಕೆ ಮುಂದಾಳತ್ವ ನೀಡಿದರು.

Related posts

Leave a Reply

Your email address will not be published. Required fields are marked *