Header Ads
Header Ads
Breaking News

ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀಯವರ ಪಟ್ಟಾಭೀಷೇಕ ದಶಮಾನೋತ್ಸವ. ಕನ್ಯಾಡಿಯ ಶ್ರೀರಾಮ ಕ್ಚೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮ.

ಬಂಟ್ವಾಳ; ಧರ್ಮಸ್ಥಳದ ಕನ್ಯಾಡಿಯ ಶ್ರೀ ರಾಮ. ಕ್ಷೇತ್ರದಲ್ಲಿ ಸೆ.3ರಂದು ನಡೆಯುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಹಾಗೂ ರಾಷ್ಟ್ರೀಯ ಧರ್ಮಸಂಸದ್ ಗೆ ಈಗಾಗಲೇ ಸಿದ್ದತೆ ಭರದಿಂದ ಸಾಗುತ್ತಿದ್ದು,ಬಂಟ್ವಾಳ ತಾಲೂಕಿನಿಂದಲೂ ಸುಮಾರು10ಸಾವಿರ ಭಕ್ತರು ಭಾಗವಹಿಸಲಿದ್ದಾರೆ ಎಂದು ರಾ.ಧರ್ಮ ಸಂಸದ್ ನ ಬಂಟ್ವಾಳ ತಾ.ಸಮಿತಿ ಅಧ್ಯಕ್ಷ ಕೇಶವ ಶಾಂತಿ ತಿಳಿಸಿದ್ದಾರೆ. ಗುರುವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳು ಪೂರ್ವಾಶ್ರಮದಲ್ಲಿ ಬಂಟ್ವಾಳ ತಾಲೂಕಿನವರೇ ಅಗಿದ್ದರಿಂದ ತಾಲೂಕಿನಲ್ಲೂ ಸಮಿತಿ ರಚಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಲಾಗಿತ್ತಿದೆ, ಜನರಿಂದಲೂ ಉತ್ತಮ ಸ್ಪಂದನೆ,ಸಹಕಾರ ದೊರೆತಿದೆ ಎಂದರು. ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಧರ್ಮಸಂಸದನ್ನು ಉದ್ಘಾಟಿಸಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಸಭಾಧ್ಯಕ್ಷತೆ ವಹಿಸುವರು.ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಡಿ.ವಿ.ಸದಾನಂದಗೌಡ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಬಿ.ಕೆ.ಹರಿಪ್ರಸಾದ್, ನವದೆಹಲಿ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ ನಿರ್ದೇಶಕ ಡ.ಎಸ್.ಪಿ. ಶರ್ಮಾಅವರು ಅತಿಥಿಯಾಗಿಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಧರ್ಮ ಸಂಸದ್ ನಲ್ಲಿ ಸುಮಾರು ಎರಡು ಸಾವಿರ ಯತಿವರ್ಯರು ಭಾಗವಹಿಸುವರು, ಅಯೋಧ್ಯೆಯಿಂದಲೇ ಸುಮಾರು 400 ಮಂದಿ ಸ್ವಾಮೀಜಿಗಳು ಭಾಗವಹಿಸುವ ನಿರೀಕ್ಷೆ ಇದೆ. ಎಲಾ ಪಕ್ಷಗಳ ಜನಪ್ರತಿನಿಧಿಗಳು, ಧಾರ್ಮಿಕ, ಸಾಮಾಜಿಕ ಮುಖಂಡರು, ಹಲವಾರು ಗಣ್ಯರು ಸಹಿತ ಸುಮಾರು ಐವತ್ತು ಸಾವಿರ ಮಂದಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ರಾಮ ಕ್ಷೇತ್ರದ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ತಿಳಿಸಿದರು. ಅಗಸ್ಟ್ 30 ರಂದು ಬೆಳ್ತಂಗಡಿಯಿಂದ ಕನ್ಯಾಡಿ ಕ್ಷೇತ್ರದ ವರೆಗೆ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ, ಸೆ.೨ರಂದು ರಾಷ್ಟ್ರದಾದ್ಯಂತದಿಂದ ಆಗಮಿಸುವ ಸಾಧುಸಂತರು, ಯತಿವರ್ಯರು, ಮಹಾಮಂಡಲೇಶ್ವರರು ಹಾಗೂ ಧರ್ಮ ಪೀಠಾಧೀಶ್ವರರನ್ನು ಉಜಿರೆಯ ಜನಾರ್ಧನ ದೇವಸ್ಥಾನದಿಂದ ಶ್ರೀ ರಾಮಕ್ಷೇತ್ರಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುವುದು ಎಂದು ವಿವರಿಸಿದರು. ಸೆ.3 ರಂದು ಬೆ.7ರಿಂದ9ರವರೆಗೆ ಕ್ಷೇತ್ರದ ವೇ.ಮೂ.ಲಕ್ಷ್ಮೀಪತಿ ಗೋಪಾಲಾಚಾರ್ಯರ ನೇತೃತ್ವದಲ್ಲಿ ಶ್ರೀರಾಮ ತಾರಕ ಮಂತ್ರ ಯಜ್ಞ ಬಳಿಕ ಶ್ರೀಗಳ ಪಟ್ಟಾಭಿಷೇಕ ದಶಮಾನೋತ್ಸವ ನಡೆಯಲಿದ್ದು, ತದನಂತರ ರಾಷ್ಟ್ರೀಯ ಧರ್ಮಸಂಸದ್ ಆರಂಭವಾಗಲಿದೆ. ಕೊನೆಗೆ ಹಲವು ಪ್ರಮುಖ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಬೇಬಿಕುಂದರ್, ವಿಶ್ವನಾಥ ಬಿ., ರಾಮದಾಸ್ ಬಂಟ್ವಾಳ,ಗೋಪಾಲ ಸುವರ್ಣ, ಪ್ರಸಾದ್ ಗಾಣಿಗ ಕರ್ಬೆಟ್ಟು ಮೊದಲಾದವರಿದ್ದರು.

Related posts

Leave a Reply