Header Ads
Header Ads
Breaking News

ಬ್ರಹ್ಮಾವರದಲ್ಲಿ ಮರಗಳಿಗೆ ಮೊಳೆ ಜಡಿದು ಜಾಹಿರಾತು ಫಲಕ ಅಳವಡಿಕೆ: ಖಂಡನೆ

ಬ್ರಹ್ಮಾವರದಿಂದ ಚಾಂತಾರು ಪೇತ್ರಿ ಸಂಪರ್ಕಿಸುವ ರಸ್ತೆ ಉದ್ದದ ಎರಡು ಪಾರ್ಶ್ವಗಳಲ್ಲೂ ಹೆಮ್ಮರವಾದ ಮರಗಳು ಸಿಗುತ್ತವೆ. ಅವುಗಳಿಗೆ ಜಾಹೀರಾತು ಫಲಕ ಅಳವಡಿಸುವರಿಂದ ಕಬ್ಫಿಣದ ಮೊಳೆಗಳ ಹೊಡೆಸಿಕೊಂಡು ಹಿಂಸೆ ಅನುಭವಿಸುತ್ತಿರುವುದು ಕಂಡು ಬಂದಿದೆ. ಇದು ಪರಿಸರ ಪ್ರೇಮಿಗಳ ಆಕ್ರೋಶಕ್ಕೂ ಕಾರಣವಾಗಿದೆ.ಯಾವುದೇ ಜಾಹೀರಾತು ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುವಾಗ ಸ್ಥಳಿಯ ಆಡಳಿತ ವ್ಯವಸ್ಥೆಗಳಿಂದ ಪರವಾನಿಗೆ ಪಡೆಯ ಬೇಕಾಗಿರುವುದು ಕಡ್ಡಾಯ ಆಗಿರುತ್ತದೆ. ಜೊತೆಯಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಸೂಕ್ತ ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸುವ ಬಗ್ಗೆಯೂ ನಿಯಮಾವಳಿಗಳು ಇರುತ್ತವೆ. ಆದರೆ ಇಲ್ಲಿ ನಿಯಮಾವಳಿಗಳು ಗಾಳಿಗೆ ತೂರಲಾಗಿದೆ. ಸಾಲು ಮರಗಳು ಇಲ್ಲಿ ಜಾಹೀರಾತು ಫಲಕ ಅಳವಡಿಸುವ ಕಂಬಗಳಾಗಿವೆ. ಮರಗಳು ನಿರಂತರ ಹಲ್ಲೆಗೊಳಗಾಗುತ್ತಿವೆ. ರಸ್ತೆ ಉದ್ದಕ್ಕೂ ಮರಗಳ ಕಾಂಡಗಳಿಗೆ ಮೊಳೆ ಜಡಿದ ಫಲಕಗಳು ಇಲ್ಲಿ ರಸ್ತೆ ಉದ್ದಕ್ಕೂ ಕಾಣಲು ಸಿಗುತ್ತವೆ. ಪರಿಸರದ ಸೌಂದರ್ಯವು ಕೆಟ್ಟಿದೆ. ಕೆಲವು ಕಡೆ ಮರಗಳ ಬುಡದ ಅಡಿಯಲ್ಲಿ ಕಸ ರಾಶಿಗೊಳಿಸಿ ಬೆಂಕಿ ಇಟ್ಟಿದ್ದು ಕಂಡು ಬಂದಿದೆ.ಳಿಯ ಆಡಳಿತ ವ್ಯವಸ್ಥೆ ಹಾಗೂ ಅರಣ್ಯ ಇಲಾಖೆಗಳು ಬ್ರಹ್ಮಾವರ ಸುತ್ತ ಮುತ್ತಲ ಪರಿಸರದ ಸಾಲು ಮರಗಳ ಮೇಲೆ ನಡೆಯುತ್ತಿರುವ ಹಲ್ಲೆಗಳ ತಡೆಯ ಬೇಕು, ಮತ್ತು ಮರಗಳಿಗೆ ಮೊಳೆ ಜಡಿದು ಅಳವಡಿಸಿದ ಜಾಹೀರಾತು ಫಲಕಗಳು ತೆರವುಗೊಳಿಸ ಬೇಕು. ಇಂತಹ ಪರಿಸರ ಹಾನಿಕಾರಕ ಕೃತ್ಯಗಳು ಮುಂದೆ ನಡೆಯದಂತೆ ಎಚ್ಚರಿಕೆ ವಹಿಸ ಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿ ಟ್ರಸ್ಟ್ ಇದರ ಪದಾಧಿಕಾರಿಗಳಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹ ಪಡಿಸಿದ್ದಾರೆ.

Related posts

Leave a Reply