Breaking News

ಬ್ರಹ್ಮಾವರದ ಬಂಟರ ಭವನ,  ಅಳಿಯಕಟ್ಟು ಪರಂಪರೆಯ ಧಾರ್ಮಿಕ ನಡಾವಳಿ ವಿರುದ್ಧ ಜನಸಭೆ


ಬಂಟರ ಮತ್ತು ನಾಡವರ ಜನಜಾಗೃತಿ ಬಳಗದಿಂದ ಅಳಿಯಕಟ್ಟು ಪರಂಪರೆಯ ಧಾರ್ಮಿಕ ನಡಾವಳಿಯನ್ನು ಬುಡಮೇಲು ಮಾಡುತ್ತಿರುವ ವ್ಯವಸ್ಥೆಯ ವಿರುದ್ಧ ಜನಜಾಗೃತಿ ಸಭೆ ಬ್ರಹ್ಮಾವರದ ಬಂಟರ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಏರ್ಯ ಲಕ್ಷ್ಮೀನಾರಾಯಣ ಆಳ್ವ ಉದ್ಘಾಟಿಸಿದರು. ಮಾತನಾಡಿದ ಅವರು, ಹಿಂದಿನವರು ಅಳಿಯಕಟ್ಟಿನಲ್ಲಿ ಏಕೆ ಗುರುಪೀಠವನ್ನು ಸ್ಥಾಪಿಸಲಿಲ್ಲ? ಅವರ ಪ್ರತಿಯೊಂದು ಹೆಜ್ಜೆಗೂ ಒಂದು ಸೂಕ್ತ ಕಾರಣವಿದೆ. ಅಳಿಂiಕಟ್ಟುವಿನಲ್ಲಿ ಮಾತ್ರ ಗುರುಪೀಠವಿಲ್ಲದಿರುವುದಲ್ಲ. ಬ್ರಾಹ್ಮಣರಲ್ಲೂ ಕೂಡ ಗುರುಪೀಠವಿಲ್ಲ. ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಡಾ. ಕೆ ಶಿವರಾಮ ಕಾರಂತರು ಹುಟ್ಟಿದ ಕೋಟ ಬ್ರಾಹ್ಮಣರಲ್ಲೂ ಗುರುಪೀಠವಿಲ್ಲದೆ ಬದುಕಿದ್ದಾರೆ. ಅವರು ಗುರುಪೀಠವಿಲ್ಲದೆ ಜ್ಞಾನಪೀಠ ಪ್ರಶಸ್ತಿ ಪಡೆಯಲಿಲ್ಲವೆ? ಇವರ ಈ ಗುರುಪೀಠ ಮಾಡಹೊರಟ ಕ್ರಮದಿಂದ ನಮಗೆ ಬಂಟರೆಂದು ಹೇಳಲು ಅವಮಾನವಾಗುತ್ತಿದೆ ಎಂದು ಎರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು.
ಇದೇ ವೇಳೆ ಬೆಳ್ವೆ ವಸಂತ ಶೆಟ್ಟಿ ಸರ್ಕಾರದೆದುರು ಸಮಾಜಕ್ಕಾಗಿ ಯಾವುದೇ ಸವಲತ್ತು ಕೇಳದೆ ಸ್ವಾಭಿಮಾನಿಗಳೆಂದು ಸರ್ಕಾರದೆದುರು ಪ್ರಖ್ಯಾತರಾದವರು ಬಂಟರು. ಸಂತೋಷ್ ಶೆಟ್ಟಿ ಯಾನೆ ಸಂತೋಷ್ ಗುರೂಜಿ ಬಂಟರ ಸಮಾಜದ ಹೆಸರಿನಲ್ಲಿ ತನ್ನ ಸ್ವಾರ್ಥಕ್ಕಾಗಿ ಸರ್ಕಾರದಿಂದ ೫೦ ಲಕ್ಷ ರೂಪಾಯಿಗಳನ್ನು ಸ್ವೀಕರಿಸಿದ್ದಾರೆ. ಇದು ನಮ್ಮ ಸಮಾಜದ ಸ್ವಾಭಿಮಾನಕ್ಕೆ ದಕ್ಕೆ ತಂದಿದೆ ಎಂದರು. ಬಾರ್ಕೂರು ಸಂಸ್ಥಾನದ ಹೆಸರಿನಲ್ಲಿ ದೈವ ಭೂತಗಳಿಗೆ ಅನಾಥಾಶ್ರಮವನ್ನು ಸಂತೋಷ್ ಗುರೂಜಿ ನಿರ್ಮಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯಿಂದ ಹಣವಂತರ ಪಟ್ಟಿ ತರಿಸಿಕೊಂಡು ಸಂಸ್ಥಾನ ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನು ತರಿಸಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ವಿಶ್ವ ಬಂಟರ ಯಾನೆ ನಾಡವರ ಜನಜಾಗೃತಿ ಬಳಗದ ಸಂಚಾಲಕರಾದ ಚಂದ್ರಶೇಖರ ಹೆಗ್ಡೆ ಜನಜಾಗೃತಿ ಸಮಾವೇಶದ ನಿರ್ಣಯ ಮಂಡಿಸಿದರು. ಎಲ್ಲಾ ನಿರ್ಣಯಗಳಿಗೆ ನೆರೆದ ಎಲ್ಲರೂ ಚಪ್ಪಾಳೆ ಮೂಲಕ ಸಹಮತ ಸೂಚಿಸಿದರು.

Related posts

Leave a Reply