Breaking News

ಬ್ರೆಕಿಯಲ್ ಪ್ಲೆಕ್ಸಸ್ ರಾಷ್ಟ್ರೀಯ ಸಮಾವೇಶ ಇಂದಿನಿಂದ ಜುಲೈ 30ರ ವರೆಗೆ ಆಯೋಜನೆ ಎಜೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಾಲ್‌ನಲ್ಲಿ ಕಾರ್ಯಕ್ರಮ

ಮಂಗಳೂರಿನ ಕುಂಟಿಕಾನದಲ್ಲಿರುವ ಎಜೆ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ವತಿಯಿಂದ ಬ್ರೆಕಿಯಲ್ ಪ್ಲೆಕ್ಸಸ್ ಸರ್ಜರಿಯ ಸಮಾವೇಶದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಇಂದಿನಿಂದ ಜುಲೈ ೩೦ರ ವರೆಗೆ ಎಜೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಸಮಾವೇಶ ನಡೆಯಲಿದೆ. ಇದು ಭಾರತದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಬ್ರೆಕಿಯಲ್ ಪ್ಲೆಕ್ಸಸ್ ಸರ್ಜರಿ ಗುಂಪಿನ ೯ನೇ ಸಮ್ಮೇಳನವಾಗಿದೆ.


ಈ ಸಮಾವೇಶವನ್ನು ನಿಟ್ಟೆ ಯುನಿವರ್‌ಸಿಟಿಯ ಪ್ರೊ ಚಾನ್ಸಲರ್ ಡಾ. ಶಾಂತರಾಮ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಅವರು ಬ್ರೆಕಿಯಲ್ ಪ್ಲೆಕ್ಸಸ್ ಸರ್ಜರಿ ಬಗ್ಗೆ ಮಾಹಿತಿಯನ್ನು ನೀ
ಡಿದರು.
ಅನಂತರ ಬ್ರೆಕಿಯಲ್ ಪ್ಲೆಕ್ಸಸ್ ಸರ್ಜರಿ ಗುಂಪಿನ ಅಧ್ಯಕ್ಷ ಡಾ. ಪಿ.ಎಸ್ ಭಂಡಾರಿ ಉಪನ್ಯಾಸ ನೀಡಿದರು.
ಅನಂತರ ಎಜೆ ಆಸ್ಪತ್ರೆಯ ಮೆಡಿಕಲ್ ನಿರ್ದೇಶಕರಾದ ಡಾ. ಪ್ರಶಾಂತ್ ಮಾರ್ಲ ಪ್ರಸ್ತಾವಿಕವಾಗಿ ಮಾತನಾಡಿದರು.


ಇದೇ ವೇಳೆ ಕಾರ್ಯಕ್ರಮದಲ್ಲಿ ಎಲ್‌ಎಮ್‌ಇಟಿಯ ವಯ್ಸ್ ಪ್ರಸಿಡೆಂಟ್ ಪ್ರಶಾಂತ್ ಶೆಟ್ಟಿ, ಎಡ್‌ಮಿನಿಸ್ಟ್ರೇಷನ್, ಡೆರೆಕ್ಟರ್ ಡಾ. ಅಮಿತ ಮಾರ್ಲ, ಓರ್ಗನೈಸಿಂಗ್ ಚೇರ್‌ಮೆನ್ ಡಾ. ದಿನೇಶ್ ಕದಮ್, ಎಜೆ‌ಐ‌ಎಮ್‌ಎಸ್‌ನ ಡೀನ್ ಡಾ. ಅಶೋಕ್ ಹೆಗ್ಡೆ ಮತ್ತಿತ್ತರರು ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply