Header Ads
Breaking News

ಪಡೀಲ್ : ಬ್ರೇಕ್ ಫೈಲ್ ಆಗಿ ರಾಷ್ಟ್ರೀಯ ಹೆದ್ದಾರಿಗೆ ಮಗುಚಿದ ಲಾರಿ

ನಗರದ ಪಡೀಲ್ ಬಳಿ ಲಾರಿಯೊಂದು ಬ್ರೇಕ್‍ಫೈಲ್ ಆಗಿ ರಾಷ್ಟ್ರೀಯ ಹೆದ್ದಾರಿಗೆ ಮಗುಚಿದ ಘಟನೆ ನಡೆದಿದೆ. ಇದರಿಂದ ಲಾರಿ ಚಾಲಕನಿಗೆ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಕೋಕ್ ಸಲ್ಫರ್ ಸಾಗಾಟದ ಈ ಲಾರಿಯು ಪಡೀಲ್ ಬಳಿ ಬ್ರೇಕ್‍ಫೈಲ್ ಆಯಿತು ಎನ್ನಲಾಗಿದೆ. ಇದರಿಂದ ಸುಮಾರು 10 ಅಡಿ ಆಳಕ್ಕೆ ಲಾರಿ ಬಿದ್ದಿದೆ. ಲಾರಿ ಪಲ್ಟಿ ಹೊಡೆದ ಪರಿಣಾಮ ಚಾಲಕನಿಗೆ ಹೊರಬರಲಾಗದೆ, ಸುಮಾರು 1 ಗಂಟೆಯ ಬಳಿಕ ಚಾಲಕನನ್ನು ಸ್ಥಳೀಯರ ಸಹಕಾರದಿಂದ ಪೊಲೀಸರು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.ಅಪಘಾತದಿಂದ ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ವಿದ್ಯುತ್ ತಂತಿ ಕಡಿದು ಬಿದ್ದ ತಕ್ಷಣ ಮೆಸ್ಕಾಂ ಸಿಬ್ಬಂದಿ ವರ್ಗವು ಸಂಪರ್ಕ ಕಡಿದು ಹಾಕಿದೆ. ಅಪಘಾತದಿಂದ ಕೆಲಕಾಲ ಹೆದ್ದಾರಿ ಜಾಮ್ ಆಗಿತ್ತು.

 

 

Related posts

Leave a Reply

Your email address will not be published. Required fields are marked *