Header Ads
Header Ads
Breaking News

ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ, ಯುನೈಟೆಡ್ ಫ್ರೆಂಡ್ಸ್ ಕ್ಲಬ್‌ನಿಂದ ಗುರುಪುರದಲ್ಲಿ ಯಶಸ್ವಿ ರಕ್ತದಾನ ಶಿಬಿರ

ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಹಾಗೂ ಯುನೈಟೆಡ್ ಫ್ರೆಂಡ್ಸ್ ಕ್ಲಬ್ ಗುರುಪುರ ಪೇಟೆ ಇದರ ಜಂಟಿ ಆಶ್ರಯದಲ್ಲಿ ಎ.ಜೆ ಆಸ್ಪತ್ರೆ ರಕ್ತನಿಧಿ ಮಂಗಳೂರು ಇದರ ಸಹಬಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು ಗುರುಪುರ ಪೇಟೆ ಸೊಸೈಟಿ ಮುಂಭಾಗದಲ್ಲಿರುವ ಮಿಲನ್ ಕಂಪೌಡ್‌ನ ಮರ್ಹೂಮ್ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ವೇದಿಕೆಯಲ್ಲಿ ಯಶಸ್ವಿಯಾಗಿ ಜರುಗಿತು.ಗುರುಪುರದ ದಾರುಸ್ಸಲಾಂ ಜುಮಾ ಮಸೀದಿಯ ಖತೀಬರಾದ ಅಬ್ಬಾಸ್ ಫೈಝಿ ದುವಾಶಿರ್ವಚನದೊಂದಿಗೆ ಮುಸ್ತಫ ಅಡ್ಡೂರು ದೆಮ್ಮಲೆ ಯವರು ಉದ್ಘಾಟಿಸಿದರು. ಶಿಬಿರದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಝರ್ ಎಂ.ಎಸ್ ರವರು ವಹಿಸಿದ್ದರು.

ರಕ್ತ ದಾನ ಶಿಬಿರದಲ್ಲಿ ಒಟ್ಟು 100 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಎ.ಜೆ ಆಸ್ಪತ್ರೆ ರಕ್ತನಿಧಿ ಮಂಗಳೂರು ಇದರ ಬ್ಲಡ್ ಬ್ಯಾಂಕ್ ಅಧಿಕಾರಿಗಳ ತಂಡ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.ಮುಖ್ಯ ಅತಿಥಿಗಳಾಗಿ ಹಾಜಿ ಶಾಹುಲ್ ಹಮೀದ್ ಮೆಟ್ರೊ, ಅಬ್ದುಲ್ ಅಝೀಝ್ ಬಾಷಾ, ಜಿ.ಎಂ ಇಕ್ಬಾಲ್ ಮಿಲನ್,ಉದಯ ಭಟ್,ಹಾಜಿ ಶೇಕಬ್ಬ ಡಿ.ಎಸ್,ರಿಯಾಝ್ ಮಿಲನ್,ಹಂಝ ಗುರುಪುರ, ಹಾಜಿ ಶೇಕಬ್ಬ ಸೆಲೀನ, ರಫೀಕ್ ತಾರಿಕರಿಯ,ಅಬ್ದುಲ್ ಹಮೀದ್,ಮನ್ಸೂರ್ ಉಳಾಯಿಬೆಟ್ಟು,ಗೋಪಾಲಕೃಷ್ಣ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಮತ್ತು ಯುನೈಟೆಡ್ ಫ್ರೆಂಡ್ಸ್ ಕ್ಲಬ್ ಗುರುಪುರ ಪೇಟೆ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply