Header Ads
Header Ads
Breaking News

ಭಂಡಾರಿ ಯುವ ಸಂಗಮ-2018 ಜ.7 ರಂದು ಮಂಗಳೂರಿನ ಪುರಭವನದಲ್ಲಿ ಕಾರ್ಯಕ್ರಮ

ಭಂಡಾರಿ ಯುವ ವೇದಿಕೆ ನೇತೃತ್ವದಲ್ಲಿ ಪ್ರಥಮ ಬಾರಿಗೆ ಭಂಡಾರಿ ಯುವ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜನವರಿ 7 ರಂದು ಮಂಗಳೂರಿನ ಪುರಭವನದಲ್ಲಿ ವಿನೂತನ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಭಂಡಾರಿ ಯುವ ವೇದಿಕೆಯ ಅಧ್ಯಕ್ಷರಾದ ಸತ್ಯರಂಜನ್ ಭಂಡಾರಿ ಹೇಳಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಭಂಡಾರಿ ಯುವ ವೇದಿಕೆಯು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಭಂಡಾರಿ, ಮಹಾಮಂಡಲ ಹಾಗೂ ಭಂಡಾರಿ ಸಮಾಜ ಸಂಘದ ಅಡಿಯಲ್ಲಿ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.ಜನವರಿ 7 ರಂದು 8.30 ಕ್ಕೆ ಮಂಗಳೂರು ಬಲ್ಮಠ ರಸ್ತೆಯ ಶಾಂತಿ ನೊಲಯ ಮೈದಾನದಿಂದ ಪುರಭವನದವರೆಗೆ ವಾಹನ ಜಾಥಾ ಮೆರವಣಿಗೆ, ಬೆಳಗ್ಗೆ 10  ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಚಿತ್ರಕಲಾ ಸ್ಪರ್ಧೆ, ಗಣ್ಯರಿಗೆ ಸನ್ಮಾನ, ಫ್ಯಾಶನ್ ಶೋ-ಮಿಸ್ ಭಂಡಾರಿ ಮತ್ತು ಮಿಸ್ಟರ್ ಭಂಡಾರಿ ಯುವ ಪ್ರತಿಭೆಗಳಿಂದ ವೈಶಿಷ್ಟ್ಯಮಯ ಕಲಾ ಪ್ರದರ್ಶನ, ಸಂಜೆ ಭಂಡಾರಿ ಪ್ರತಿಭೆಗಳಿಂದ ಯಕ್ಷಗಾನ ನಾತ್ಯ ವೈಭವ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಯೋಜಕರಾದ ನಾಗೇಶ್ ಭಂಡಾರಿ, ನಿತ್ಯಾನಂದ ಭಂಡಾರಿ, ನೀತಾ ಭಂಡಾರಿ, ಕೃಷ್ಣಾನಂದ ಭಂಡಾರಿ ಉಪಸ್ಥಿತರಿದ್ದರು,
ವರದಿ: ನಾಗರಾಜ್ ಮಂಗಳೂರು

Related posts