Header Ads
Breaking News

ಭಗತ್‍ಸಿಂಗ್, ರಾಜಗುರು, ಸುಖದೇವ್‍ರ ಹುತಾತ್ಮ ದಿನ : ಬಿಜೆಪಿ ಯುವ ಮೋರ್ಚಾದದಿಂದ ಸುರತ್ಕಲ್‍ನಲ್ಲಿ ಪಂಜಿನ ಮೆರವಣಿಗೆ

ಮಂಗಳೂರು ಉತ್ತರ ಬಿಜೆಪಿ ಯುವ ಮೋರ್ಚಾದ ವತಿಯಿಂದ ಕ್ರಾಂತಿಕಾರಿ ದೇಶಭಕ್ತರಾದ ಭಗತ್ ಸಿಂಗ್, ರಾಜಗುರು, ಸುಖದೇವರರ ಶಹೀದ್ ದಿನದ ನಿಮಿತ್ತ ಪಂಜಿನ ಮೆರವಣಿಗೆ ಸುರತ್ಕಲ್ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಕ್ರಾಂತಿಕಾರಿ ದೇಶಭಕ್ತರಾದ ಭಗತ್ ಸಿಂಗ್, ರಾಜಗುರು, ಸುಖದೇವರ್ ಹುತಾತ್ಮ ದಿನದ ನಿಮಿತ್ತ ಬಿಜೆಪಿ ಯುವ ಮೊರ್ಚಾದಿಂದ ಪಂಜಿನ ಮೆರವಣಿಗೆ ಹಮ್ಮಿಕೊಂಡರು. ಸುರತ್ಕಲ್‍ನ ಬಿಜೆಪಿ ಕಚೇರಿಯಲ್ಲಿ ಹುತಾತ್ಮರ ಭಾವಚಿತ್ರಗಳಿಗೆ ಪುಷ್ಮನಮನ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಸುಮಂಗಲಾ ರಾವ್ ಮಾತನಾಡಿ, ಬ್ರಿಟಿಷರ ಅಳ್ವಿಕೆಯಲ್ಲಿ ಅತಿ ಸಣ್ಣ ವಯಸ್ಸಿನಲ್ಲಿ ಪ್ರಾಣ ತ್ಯಾಗ ಮಾಡಿದ ಭಗತ್ ಸಿಂಗ್, ರಾಜಗುರು, ಸುಖದೇವರ್ ಅವರನ್ನು ಸ್ಮರಿಸುತ್ತಿದ್ದೇವೆ. ಭಾರತಕ್ಕೆ ಸ್ವತಂತ್ರ ಸಿಕ್ಕಿ ನಾವು ಸ್ವತಂತ್ರರಾಗಿರಲು ಮೂವರು ಭಾಗಿದಾರರಾಗಿದ್ದಾರೆ ಎಂದರು.
ಈ ಸಂದರ್ಭ ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಅಧ್ಯಕ್ಷರು ತಿಲಕ್‍ರಾಜ್ ಕೃಷ್ಣಾಪುರ, ಉಪಾಧ್ಯಕ್ಷರು ವಿಠಲ್ ಸಾಲ್ಯಾನ್, ರಾಜ್ಯ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ಶ್ವೇತಾ ಪೂಜಾರಿ, ಮಹೇಶ್ ಮೂರ್ತಿ ಸುರತ್ಕಲ್, ಭರತ್ ರಾಜ್ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *