Header Ads
Header Ads
Breaking News

ಭಗವಾನ್, ಪಿಣರಾಯಿ ವಿಜಯನ್ ಪ್ರತಿಕೃತಿ ದಹಿಸಿ ಆಕ್ರೋಶ : ಕೋಟೆಕಾರು ಬೀರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರತಿಭಟನೆ

ಉಳ್ಳಾಲ: ಹಿಂದೂ ಸಮಾಜದ ಆದರ್ಶ ಪುರುಷ ಶ್ರೀರಾಮ ಪ್ರಭು ಮತ್ತು ಹಿಂದೂ ದೇವತೆಗಳನ್ನು ಅವಹೇಳನ ಮಾಡಿ, ತುಚ್ಛವಾಗಿ ನಿಂದಿಸಿ ಸ್ವಯಂ ಘೋಷಿತ ವಿಚಾರವಾಧಿಗಳ ಹಾಗೂ ಇದನ್ನು ಪ್ರೇರೇಪಿಸುವ ರಾಜ್ಯ ಸರಕಾರದ ವಿರುದ್ಧ ಕೋಟೆಕಾರು ಬೀರಿಯಲ್ಲಿ ಹಿಂದು ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿದರು.ಪ್ರತಿಭಟನಾ ಸಭೆಯಲ್ಲಿ ಹಿಂದು ಜಾಗರಣಾ ವೇದಿಕೆ ವಿಟ್ಲ ಪ್ರಖಂಡ ಕಾರ್‍ಯದರ್ಶಿ ಗಣರಾಜ್ ಭಟ್ ಕೆದಿಲ ಮಾತನಾಡಿ, ಹಿಂದೂಗಳ ರಕ್ಷಣೆಯ ರಕ್ಷೆಯೇ ರಾಮನಾಮ. ಆದರೂ ಹಿಂದೂಗಳ ಆಚಾರ-ವಿಚಾರಗಳಲ್ಲಿ ಭಾಗಿಯಾಗದ ಸದಾ ಬಾರಿನಲ್ಲಿ ಕುಳಿತು, ಹೆಣ್ಮಕ್ಕಳ ಸಹವಾಸದಲ್ಲಿರುವ ಇರುವ ಭಗವಾನನಿಗೆ ಶ್ರೀ ರಾಮನ ಹೆಸರನ್ನು ಹೇಳುವ ನೈತಿಕತೆಯೇ ಇಲ್ಲ ಎಂದು ಹೇಳಿದರು.

ಇದೇ ಸಂದರ್ಭ ಸಾಹಿತಿ ಭಗವಾನ್ ಮತ್ತು ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕೃತಿಯನ್ನು ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ದಹಿಸಿ ಪ್ರತಿಭಟಿಸಲಾಯಿತು. ಪ್ರತಿಭಟನೆಯಲ್ಲಿ ಆರ್‌ಎಸ್‌ಎಸ್‌ನ ಜಿಲ್ಲಾ ಸಹ ಕಾರ್‍ಯವಾಹ ನಾಗೇಶ್ ಕುಂಪಲ, ಜಿಲ್ಲಾ ಕಾರ್‍ಯವಾಹ ಪ್ರವೀಣ್ ತಲಪಾಡಿ, ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಉಳ್ಳಾಲ ತಾಲೂಕು ವ್ಯವಸ್ಥಾ ಪ್ರಮುಖ್ ಅರ್ಜುನ್ ಮಾಡೂರು ಮೊದಲಾದವರು ಹಾಜರಿದ್ದರು.

Related posts

Leave a Reply