Header Ads
Header Ads
Header Ads
Breaking News

ಭಗಿನಿ ಸಮಾಜದಲ್ಲಿ ದೀಪಾವಳಿ ಸಂಭ್ರಮ ಉಪಮೇಯರ್ ರಜನೀಶ್ ಕಾಪಿಕಾಡ್ ಭಾಗಿ

ಮಂಗಳೂರಿನ ಜಪ್ಪು ಭಗಿನಿ ಸಮಾಜದಲ್ಲಿರುವ ಅವಕಾಶ ವಂಚಿತ ಮಕ್ಕಳ ಜೊತೆಯಲ್ಲಿ ದೀಪಾವಳಿ ಹಬ್ಬವನ್ನು ಗುಜರಾತಿ ಅಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಚರಿಸಿದರು. ಇನ್ನೂ ಗುಜರಾತಿ ಶಾಲೆಯ ವಿದ್ಯಾಥಿಗಳು ಹಾಗೂ ಶಿಕ್ಷಕರು ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳದೇ, ಇಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡರು.

 

 

 

ಇದೇ ಸಂದರ್ಭದಲ್ಲಿ ಅವಕಾಶ ವಂಚಿತ ಮಕ್ಕಳಿಗೆ ಹಾಗೂ ಸಿಬ್ಬಂದಿಗಳಿಗೆ ಹೊಸ ಬಟ್ಟೆಯನ್ನು ನೀಡಿದರು. ಇನ್ನೂ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪಮೇಯರ್ ರಜನೀಶ್ ಕಾಪಿಕಾಡ್ ಪಾಲ್ಗೊಂಡು, ಮಾತನಾಡಿದರು, ಮಕ್ಕಳ ಜೊತೆಯಲ್ಲಿ ದೀಪಾವಳಿ ಆಚರಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಅಂತಾ ಹೇಳಿದ್ರು.


ಈ ವೇಳೆ ಕಾಪೋರೇಟರ್ ರಾಜೇಂದ್ರಕುಮಾರ್, ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷ ಆಶಾ , ಮುಖ್ಯೋಪಾಧ್ಯಯಿನಿ ಅಶ್ವಿನಿ ಶೆಣೈ, ಭಗನಿ ಸಮಾಜ ಅಧ್ಯಕ್ಷ ಶಾಂತಿ ಪೈ ಮತ್ತಿತರು ಉಪಸ್ಥತರಿದ್ರು.

Related posts

Leave a Reply