Header Ads
Header Ads
Breaking News

ಭಟ್ಕಳ:ಅಂಗವಿಕಲರ ಸರ್ವಿಸ್ ಸ್ಟೇಶನ್‌ಗೆ ಹಾಕಿರುವ ವಿದ್ಯುತ್ ಕಡಿತಗೊಳಿಸಲು ಮನವಿ ನೀಡಿದ್ದರ ವಿರುದ್ಧ ಆಕ್ರೋಶ

ಭಟ್ಕಳ ತಾಲೂಕಿನ ಮಾವಳ್ಳಿ 1ರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲವು ಸದಸ್ಯರು ತಮ್ಮ ಸ್ವಹಿತಾಸಕ್ತಿಗಾಗಿ ಅಂಗವಿಕಲರೊಬ್ಬರ ಸರ್ವಿಸ್ ಸ್ಟೇಷನ್ ವಿದ್ಯುತ್ ಕಡಿತ ಗೋಳಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಕೊಟ್ಟಿರುವುದರಿಂದ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಶಾಸಕರಿಗೆ ಪಂಚಾಯತ್ ಸದಸ್ಯರು ಮನವಿಯನ್ನು ನೀಡಿದರು.
ಭಟ್ಕಳ ತಾಲೂಕ ಮಾವಳ್ಳಿ ಪಂಚಾಯತ್ ವ್ಯಾಪ್ತಿಯ ಹೀರೆದೋಮಿಯ ಕೆಲವು ಸದಸ್ಯರು ಮಾದೇವ ರಾಮ ನಾಯ್ಕ ಎನ್ನುವ ಅಂಗವಿಲಕರೊಬ್ಬರ ಸರ್ವಿಸ್ ಸ್ಟೇಷನ್ ವಿದ್ಯುತ್ ಕಡಿತ ಗೋಳಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಕೊಟ್ಟರುತ್ತಾರೆ. ಆದರೆ ಪಂಚಾಯತ್‌ನ ಇನ್ನು ಕೆಲವು ಸದಸ್ಯರು ಅಂಗವಿಕಲರಾದ ಮಾದೇವ ರಾಮ ನಾಯ್ಕ ಅವರು ವಿದ್ಯುತ್ ಕಡಿತಗೊಳಿಸದಂತೆ ವಿನಂತಿ ಮಾಡಿದ್ದಾರೆ.

ಈ ಹಿನ್ನಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಗವಿಕಲರ ಸರ್ವಿಸ್ ಸ್ಟೇಷನ್ ವಿಧ್ಯುತ್ ಕಡಿತ ಗೋಳಿಸದ ಕಾರಣ ಪಂಚಾಯತ್ ಅಭಿವೃದ್ದಿ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಶಾಸಕರಿಗೆ ಮನವಿಯನು ಕೊಟ್ಟ ಹಿನ್ನಲೆಯಲ್ಲಿ ಮಾವಳ್ಳಿ ೧ ಪಂಚಾಯತ್ ಸದಸ್ಯರುಗಳಾದ ಜಯಂತ ನಾಯ್ಕ ಮತ್ತು ಮಂಜುಳಾ ಜಯಂತ ನಾಯ್ಕ ಅವರು ಸುದ್ದಿಘೋಷ್ಟಿಯನ್ನು ನಡೆಸಿ ಸ್ಪಷ್ಟನೆ ನೀಡಿದರು. ಈ ಸಂದರ್ಭದಲ್ಲಿ ಮಾವಳ್ಳಿ ಪಂಚಾಯತ್ ಸದಸ್ಯೆ ಮಂಜುಳಾ ಜಯಂತ ನಾಯ್ಕ ಉಪಸ್ಥಿತರಿದ್ದರು

Related posts

Leave a Reply