Header Ads
Header Ads
Header Ads
Breaking News

ಭಟ್ಕಳದಲ್ಲಿ ಆಧಾರ್ ಅದಾಲತ್ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಡಿ.೩ರ ವರೆಗೆ ಆಧಾರ್ ಅದಾಲತ್ ಕಾರ್ಯಕ್ರಮ

ಭಟ್ಕಳ ತಾಲೂಕಿನ ಪುರಸಭೆಯ ಸಭಾಭವನದಲ್ಲಿ ಆಧಾರ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪುರಸಭೆ ಅಧ್ಯಕ್ಷ ಮಹ್ಮದ ಸಾದಿಕ್ ಮಟ್ಟಾ ಉದ್ಘಾಟಿಸಿದರು

ಆದಾರ್ ಅದಾಲತ್ತಿಗೆ ಭಟ್ಕಳ ತಾಲೂಕಿನ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸಾರ್ವಜನಿಕರು ಆಧಾರ್ ಅದಾಲತನಲ್ಲಿ ಪಾಲ್ಗೊಂಡಿದ್ದು ಡಿಸೆಂಬರ್ ೩ರ ವರೆಗೆ ಈ ಆಧಾರ್ ಅದಾಲತ್ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಆಧಾರ್ ಅದಾಲತ್‌ನಲ್ಲಿ ಹಾಜರಾಗಿ ಇದರ ಪ್ರಯೋಜನ ಪಡೆದುಕೊಳ್ಳಬಹುದು.

 

ಇ-ಆಡಳಿತ ಕೇಂದ್ರ ಬೆಂಗಳೂರು ಹಾಗೂ ಜಿಲ್ಲಾಡಳಿತ ಉತ್ತರ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ತಾಲುಕು ಮಟ್ಟದ ಆಧಾರ ಅದಾಲತ್ ಯೋಜನೆಯೂ ನಡೆದಿದ್ದು, ಅದಾಲತನಲ್ಲಿ ಮೊಬೈಲ್ ಲಿಂಕ್, ವಿಳಾಸ ಬದಲಾವಣೆ, ಹೆಸರಿನಲ್ಲಿನ ದೋಷಗಳ ತಿದ್ದುಪಡಿ, ವಯಸ್ಸು ಮತ್ತು ಹುಟ್ಟಿದ ದಿನಾಂಕ ತಿದ್ದುಪಡಿ ಸಂಬಂಧಿಸಿದಂತೆ ಆಧಾರ್ ಕಾರ್ಡಗಳನ್ನು ನವೀಕರಣ ಮಾಡಿಕೊಡಲಾಗುವುದು. ಈವರೆಗೆ ಆಧಾರ್ ನೋಂದಣಿ ಮಾಡಿಸದೇ ಇದ್ದವರು ಹಾಗೂ ಕಾರ್ಡನಲ್ಲಿ ಏನಾದರೂ ದೋಷ ಇದ್ದರೆ ಅದಾಲತ್‌ನಲ್ಲಿ ಭಾಗವಹಿಸಿ ಸರಿಪಡಿಸಿಕೊಳ್ಳಬಹುದು. ತಹಸೀಲ್ದಾರ್ ವಿ.ಎನ್. ಬಾಡಕರ್ ಹೇಳಿದ್ದಾರೆ.

ಈ ಸಂಧರ್ಬದಲ್ಲಿ ಉತ್ತರ ಕನ್ನಡ ಜಿಲ್ಲಾ ಆಧಾರ್ ಕೇಂದ್ರ ಸಮಾಲೋಚಕ ಮಹಾಬಲೇಶ್ವರ ದೇಸಾಯಿ, , ಪುರಸಭಾ ಪ್ರಬಾರ ಮುಖ್ಯಾಧಿಕಾರಿ ವೆಂಕಟೇಶ ನಾವುಡ ಮುಂತಾದವರು ಹಾಜರಿದ್ದರು.
ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply