Header Ads
Header Ads
Breaking News

ಭಟ್ಕಳದಲ್ಲಿ ಜೆಡಿಎಸ್ ವಿಕಾಸ ಪರ್ವ ಕಾರ್ಯಕ್ರಮ

ಭಟ್ಕಳ  ಪುರಸಭೆ ಹತ್ತಿರದ ಅಂಜುಮಾನ ಹೈಸ್ಕೂಲ್ ಮೈದಾನದಲ್ಲಿ ಜೆಡಿಎಸ್ ಬಲ ಸಂವರ್ದನೆಯ ಹಿನ್ನೆಲೆಯಲ್ಲಿ ನಡೆಸಲಾದ ಕುಮಾರ ಪರ್ವ ಕಾರ್ಯಕ್ರಮವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್ ಹಾಗು ಬಿ.ಜೆ.ಪಿ ಪಕ್ಷಗಳು ಅಂದಾಜು 60 ವರ್ಷಗಳ ಕಾಲ ಆಡಳಿತವನ್ನು ನಡೆಸಿದ್ದವು ಆದರೆ ಅಭಿವೃದ್ದಿ ಮಾತ್ರ ಶೂನ್ಯ ಉತ್ತರ ಕನ್ನಡದಲ್ಲಿ ಅತಿಕ್ರಮಣದಾರರ ಗೋಳನ್ನು ಯಾವ ಪಕ್ಷವು ಗಣನೆಗೆ ತೆಗೆದುಕೊಳ್ಳುತ್ತಿಲ್ಲಾ ಕೇವಲ ಧರ್ಮಗಳ ಮದ್ಯ ವಿಷಬೀಜಗಳನ್ನು ಬಿತ್ತುವ ಕೇಲಸವನ್ನು ಮಾಡುತ್ತಿವೆ ಹೊನ್ನಾವರದಲ್ಲಿ ಒಂದು ಅಫಘಾತದಿಂದ ಪ್ರಾರಂಭವಾದ ಗಲಭೆಯು ಕೋಮುಗಲಭೆಗೆ ಕಾರಣವಾಯಿತು ಇದು ಆಡಳಿತ ಪಕ್ಷದ ಅದಕ್ಷತೆ ಹಾಗು ಕಾರ್ಯ ವೈಪಲ್ಯತೆಯೆ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರಸ್ ಕಾರ್ಯಕರ್ತ ಶಂಬು ಗೌಡಾ ಹಾಗು ಖ್ಯಾತ ವಕೀಲ ವಿಕ್ಟರ್ ಗೋಮ್ಸ , ಹಾಗು ಇನ್ನಿತತರರು ಜೆ.ಡಿ.ಎಸ್ ಪಕ್ಷಕ್ಕೆ ಸೆರ್ಪಡೆಯಾದರು.
ಕಾರ್ಯಕ್ರದಲ್ಲಿ ಇನಾಯತ ಉಲ್ಲಾ ಶಾಬಂದಿ, ಸೊರಬಾ ಶಾಸಕ ಮದು ಬಂಗಾರಪ್ಪ ಜೆ.ಡಿ.ಎಸ್ ರಾಜ್ಯ ಕಾರ್ಯಾದರ್ಶಿ ಜೆ.ಎಂ ಪಾರುಕ್ ಭಾವಾ, ಭಟ್ಕಳ ತಾಲೂಕ ಜೆ.ಡಿ.ಎಸ್ ಅಧ್ಯಕ್ಷ ಮತ್ತಿತರರು ಉಪಸ್ಥಿತರಿದ್ದರು.
ವರದಿ ರಾಘವೇಂದ್ರ ಮಲ್ಯ ಭಟ್ಕಳ