Header Ads
Header Ads
Breaking News

ಭಟ್ಕಳದಲ್ಲಿ ತಾಲೂಕು ಮಟ್ಟದ ದೇಹದಾರ್ಢ್ಯ ಸ್ಫರ್ಧೆ. ಮಿ. ಭಟ್ಕಳ-2018, ಏ. 7ರಂದು ನಡೆಯಲಿರುವ ಸ್ಪರ್ಧೆ ತಾಲೂಕು ಬಾಡಿ ಬಿಲ್ಡಿಂಗ್ ಅಸೋಶಿಯೇಶನ್ ವತಿಯಿಂದ ಕಾರ್‍ಯಕ್ರಮ ನ್ಯೂ ಇಂಗ್ಲೀಷ್ ಶಾಲಾ ಸಭಾ ಭವನದಲ್ಲಿ ಸ್ಪರ್ಧೆಯ ಆಯೋಜನೆ ಪ್ರ. ಕಾರ್ಯದರ್ಶಿ ವೆಂಕಟೇಶ ನಾಯ್ಕರಿಂದ ಮಾಧ್ಯಮಗೋಷ್ಠಿಯಲ್ಲಿ ವಿವರ

ಭಟ್ಕಳ ತಾಲೂಕು ಬಾಡಿ ಬಿಲ್ಡಿಂಗ್ ಅಸೋಶಿಯೇಶನ್ ವತಿಯಿಂದ ಏಪ್ರೀಲ್ 7ರಂದು ನ್ಯೂ ಇಂಗ್ಲೀಷ್ ಶಾಲೆಯ ಕಮಲಾವತಿ ರಾಮನಾಥ ಶ್ಯಾನಭಾಗ ಸಭಾ ಭವನದಲ್ಲಿ ಮಿಸ್ಟರ್ .ಭಟ್ಕಳ-2018 ತಾಲೂಕು ಮಟ್ಟದ ದೇಹದಾರ್ಢ್ಯ ಸ್ಫರ್ಧೆ. ನಡೆಸಲಾಗುವುದೆಂದು ಅಸೋಶಿಯೇಶನ್ನಿನ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯ್ಕ ಅವರು ತಿಳಿಸಿದರು.ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ’ಈಗಿನ ಯುವ ಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದು,. ಈ ನಿಟ್ಟಿನಲ್ಲಿ ಅಂತಹ ದುಶ್ಚಟಗಳಿಗೆ ಆಕರ್ಷಿತರಾಗುತ್ತಿರುವ ಯುವಕರನ್ನು ಮುಖ್ಯ ವಾಹಿನಿಗೆ ತರುವುದು ನಮ್ಮ ಸ್ಪರ್ಧೆಯ ಮೂಲ ಉದ್ದೇಶವಾಗಿದೆ. ಆ ಮೂಲಕ ಆರೋಗ್ಯವಂತ ಸುಂದರ ಸಮಾಜವನ್ನು ಕಟ್ಟಬೇಕಾಗಿದೆ. ಒಟ್ಟು 7 ವಿಭಾಗದಲ್ಲಿ 55 ಕೆ.ಜಿ. 60, 65, 70, 75, 80, 85ಕ್ಕಿಂತ ಹೆಚ್ಚು ತೂಕವುಳ್ಳವರ ತಂಡಗಳನ್ನಾಗಿ ಮಾಡಿ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಬಳಿಕ ಎಲ್ಲಾ ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದ ಸ್ಪರ್ಧಾಳುಗಳ ನಡುವೆ ಇನ್ನೊಂದು ಸ್ಪರ್ಧೆ ನಡೆಸಿ ಅದರಲ್ಲಿ ಮೊದಲ ಸ್ಥಾನ ಪಡೆದ ಉತ್ತಮ ದೇಹದಾರ್ಢ್ಯ ಪಟುವಿಗೆ ಮಿಸ್ಟರ್ ಭಟ್ಕಳ-2018’ ಎಂದು ಘೋಷಿಸಲಾಗುವುದು. ಸ್ಫರ್ಧೆಯಲ್ಲಿ 1 ರಿಂದ 5ನೇ ಸ್ಥಾನದವರೆಗೆ ವಿಜೇತರಾದ ಎಲ್ಲಾ ಸ್ಪರ್ಧಾಳುಗಳಿಗೂ ಟ್ರೋಫಿ, ನಗದು, ಪ್ರಶಸ್ತಿ ಪತ್ರ ನೀಡಲಾಗುವುದು. ಎಂದು ಹೇಳಿದರು.ಈ ಸಂದರ್ಭ ಭಟ್ಕಳ ತಾಲೂಕು ಬಾಡಿ ಬಿಲ್ಡಿಂಗ್ ಅಸೋಸಿಯೇಶನ್ ಗೌರವಾಧ್ಯಕ್ಷ ಅಕ್ಷಯ ನಾರಾಯಣ ಮೋಗೇರ, ಅಧ್ಯಕ್ಷ ಅಜೀಜ್‌ರ್ರೆಹಮಾನ್, ಉಪಾಧ್ಯಕ್ಷರಾದ ನಜೀರ್ ಖಾಸಿಂ ಜಿ ಮತ್ತಿತರರು ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ಮಲ್ಯ ಭಟ್ಕಳ