Header Ads
Header Ads
Header Ads
Breaking News

ಭಟ್ಕಳದಲ್ಲಿ ದೀಪಗಳ ಹಬ್ಬ ದೀಪಾವಳಿಯ ಸಂಭ್ರಮ ಹಣತೆ, ವಿದ್ಯುತ್ ದೀಪಗಳ ಬೆಳಕಿನ ಸ್ವಾಗತ ಹಬ್ಬಕ್ಕೆ ಬೇಕಾಗಿರುವ ವಸ್ತುಗಳ ಖರೀದಿ ಬಲು ಜೋರು

ಭಟ್ಕಳ, ಶಿರಾಲಿ ಹಾಗು ಮುರ್ಡೇಶ್ವರದಲ್ಲಿ ದೀಪಗಳ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದ್ದು, ಹಣತೆ, ವಿದ್ಯುತ್ ದೀಪಗಳ ಬೆಳಕಿನ ಸ್ವಾಗತ ನಡೆದಿವೆ. ಇನ್ನು ಹಬ್ಬಕ್ಕೆ ಬೇಕಾಗಿರುವ ಖರೀದಿ ಬಲು ಜೋರಾಗಿದ್ದು, ಮನೆ ಮನೆಗಳಲ್ಲಿ ಜನರಲ್ಲಿ ಸಂಭ್ರಮ ಮನೆಮಾಡಿದೆ. ಬೆಳಕಿನ ಹಬ್ಬದ ಸಂಭ್ರಮದ ಒಂದು ಝಲಕ ಇಲ್ಲಿದೆ ನೋಡಿ.

ಹಬ್ಬಗಳ ಸಾಲಿನಲ್ಲಿ ಅತೀ ಮುಖ್ಯವಾದ ಕುಟುಂದ ಸಂಭ್ರಮದ ಹಬ್ಬ ದೀಪಾವಳಿಯಾಗಿದೆ. ಈ ದೀಪಾವಳಿಯ ಸಂಭ್ರಮ ನಮ್ಮ ಭಟ್ಕಳ, ಶಿರಾಲಿ ಹಾಗು ಮುರ್ಡೇಶ್ವರದಲ್ಲಿ ಆರಂಭವಾಗಿದ್ದು, ನಾಲ್ಕು ದಿನಗಳ ಹಬ್ಬಕ್ಕೆ ಚಾಲನೆ ಸಿಕ್ಕಿದೆ. ಎಲ್ಲಾ ಹಬ್ಬಗಳಲ್ಲು ಹೂವು, ಹಣ್ಣುಗಳ ಖರೀದಿ ಮಾರಾಟ ಜೋರಾಗಿದ್ದರೆ ದೀಪಗಳ ಹಬ್ಬಕ್ಕೆ ಹಣತೆ, ಆಕಾಶ ಬುಟ್ಟಿಗಳು ಸೇರಿದಂತೆ ಅಲಂಕಾರಿಕ ವಸ್ತುಗಳ ಖರೀದಿ ಮಾರಾಟ ಜೋರಾಗಿದೆ. ಇದರ ಜೊತೆಗೆ ವಿವಿಧ ಬಗೆಯ ಹೂವು, ಹಣ್ಣು, ಕಬ್ಬು, ಬಾಳೆ, ಮಾವಿನ ತೋರಣ ಸೇರಿದಂತೆ ಅಲಂಕಾರಿಕ ವಸ್ತುಗಳ ಖರೀದಿ ಸಹ ಜೋರಾಗಿದೆ. ಭಟ್ಕಳ ತಾಲೂಕಿನಲ್ಲಿ ದೀಪಾವಳಿ ಹಬ್ಬ ಸಂಭ್ರಮದ ಹಬ್ಬವಾಗಿದ್ದು, ತಾಲೂಕಿಗೆ ತಾಲೂಕೆ ಸಂಭ್ರಮದಲ್ಲಿ ಮಿಂದೆದುತ್ತದೆ. ಹಬ್ಬಕ್ಕೂ ಎರಡು ದಿನ ಮೊದಲೇ ಭಟ್ಕಳ ಮಾರ್ಕೇಟ್‌ನಲ್ಲಿ ಜನ ಜಂಗುಳಿ ಜೋರಾಗಿತ್ತು. ಬುಧವಾರದಂದು ಎಲ್ಲೆಡೆ ದೀಪಾವಳಿಯ ರಂಗು ಜೋರಾಗಿದೆ. ದೀಪಾವಳಿಯ ವಿಶೇಷವಾಗಿ ಎಲ್ಲರ ಮನೆಗಳಲ್ಲು ಮಕ್ಕಳಿಂದ ಹಿರಿಯರ ತನಕ ತಲೆ, ಕೈ-ಕಾಲು ಹಾಗು ಮೈಗಳಿಗೆ ತೆಂಗಿನ‌ಎಣ್ಣೆಯನ್ನು ಹಚ್ಚಿ ಹಬ್ಬಕ್ಕೆ ತಯಾರಾಗುತ್ತಾರೆ.

ಇನ್ನು ನಮ್ಮ ಈ ಭಟ್ಕಳದ ಜನರು ತಮ್ಮ ತಮ್ಮ ಗದ್ದೆಯಲ್ಲಿ ಬೆಳೆದ ಭತ್ತಗಳ ಪೈರನ್ನು ಮನೆಯ ಮುಂದೆ ಹಾಕಿರುತ್ತಾರೆ. ವರ್ಷಪೂರ್ತಿ ದುಡಿದ ನಮ್ಮ ರೈತರಿಗೆ ಈ ದೀಪಗಳ ಹಬ್ಬ ಅವರಲ್ಲಿ ಏನೋ ಒಂದು ಸಂಭ್ರಮ ತುಂಬಿರುತ್ತದೆ. ಇನ್ನು ಗುರುವಾರದಂದು ಎಲ್ಲೆಡೆ ಲಕ್ಷ್ಮೀ ಪೂಜೆಯ ಸಂಭ್ರಮವಿದ್ದು, ಮನೆ, ಅಂಗಡಿ-ಮುಂಗಟ್ಟುಗಳನ್ನು ದೀಪದಿಂದ ಅಲಂಕೃತಗೊಳಿಸಿ ದೀಪಗಳ ಹಬ್ಬಕ್ಕೆ ಮೈ-ಮನಸ್ಸು ತೊಡಗಿಸಿ ಆಚರಣೆ ಮಾಡುತ್ತಾರೆ. ಮನೆಯಲ್ಲಿ ಮಹಿಳೆಯರು ಮನೆಯನ್ನು ಹಣತೆ ಹಾಗು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸುದರಲ್ಲಿ ಬ್ಯೂಸಿ ಆಗಿದ್ದಾರೆ. ಈ ಎಲ್ಲಾ ವಿಶೇಷತೆಯ ಜೊತೆಗೆ ದೀಪಾವಳಿ ಮನೆಯಲ್ಲಿನ ಮಕ್ಕಳಿಗೆ ಅಪ್ಪ ತಂದಿರುವ ಪಟಾಕಿಯನ್ನೇ ಸಿಡಿಸುವ ಕಾತುರವಿರುತ್ತದೆ. ಅದೇ ರೀತಿ ಮನೆಗಳಲ್ಲಿ ಸಿಹಿ ಅಡುಗೆಯನ್ನು ಮಾಡಿ ಸಂತೋಷದಿಂದ ಹಬ್ಬದೂಟವನ್ನು ಮಾಡುತ್ತಾರೆ. ಇನ್ನು ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳಿಗೆ ದಿನವಿಡೀ ಪಟಾಕಿ ಹೊಡೆಯುವುದೇ ಅವರ ದೀಪಾವಳಿ ಹಬ್ಬದ ಮಜಾ. ಆದರೆ ಮಕ್ಕಳು ಪಟಾಕಿಯನ್ನು ಹೊಡೆಯುವಾಗ ಮನೆಯ ಹಿರಿಯರು ಸ್ವಲ್ಪ ಜಾಗರೂಕರಾಗಿ ಪಟಾಕಿ ಹೊಡೆಯುವ ರೀತಿಯಲ್ಲಿ ನೋಡಿಕೊಂಡರೆ ಹಬ್ಬದ ಕಳೆ ಇನ್ನಷ್ಟು ಬೆಳಗುತ್ತದೆ. ಒಟ್ಟಾರೆ ಈ ವರ್ಷದ ಬೆಳಕಿನ ಹಬ್ಬ ಎಲ್ಲರಿಗೂ ಖುಷಿ ಸಂತೋಷ ತರಲಿ ಎನ್ನುವುದು ನಮ್ಮ ವಾಹೀನಿಯ ಆಶಯವಾಗಿದೆ.

ವರದಿ: ರಾಘವೇಂದ್ರ ಮಲ್ಯ ಭಟ್ಕಳ.

Related posts

Leave a Reply