Header Ads
Header Ads
Header Ads
Breaking News

ಭಟ್ಕಳದಲ್ಲಿ ಬಿಜೆಪಿಯಿಂದ ಮೌನ ಮೆರವಣಿಗೆ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ಆರೋಪ

ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿ ಜಿಲ್ಲಾಢಳಿತ ಮತ್ತು ಪೊಲೀಸ್ ಇಲಾಖೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಭಟ್ಕಳದಲ್ಲಿ ಬಿಜೆಪಿ ಕಾರ್ಯಕರ್ತರು ಮೌನ ಮೆರವಣಿಗೆ ನಡೆಸಿದರು.
ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಮತ್ತು ಜಿಲ್ಲಾಡಳಿತ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಮತ್ತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ದಾಖಲಿಸಿರುವ ಸುಳ್ಳು ದರೋಡೆ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ಪಕ್ಷದ ವತಿಯಿಂದ ಪಕ್ಷದ ಶಿರಾಲಿ ಕಛೇರಿಯಿಂದ ಭಟ್ಕಳದ ತಹಶೀಲ್ದಾರ ಕಛೇರಿವರೆಗೆ ಪಾದಯಾತ್ರೆಯ ಮೂಲಕ ಮೌನ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಘಟಕದ ಮುಖಂಡರಾದ ರಾಜ್ಯ ಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ,ಉತ್ತರ ಕನ್ನಡ ಜಿಲ್ಲಾದ್ಯಕ್ಷರು ಕೆ.ಜಿ ನಾಯ್ಕ ಹಳಿಯಾಳ ಮಾಜಿ ಶಾಸಕ ಸುನಿಲ್ ಹೆಗಡೆ,ಕುಮಟಾ ಮಾಜಿ ಶಾಸಕ ದಿನಕರ್ ಶೆಟ್ಟಿ,ಶಿರಶಿ ಬಿ.ಜೆ.ಪಿ ಮುಖಂಡ ಪ್ರಮೋದ ಹೆಗಡೆ ಕುಮಟಾದಲ್ಲಿ ಬಿ.ಜೆ.ಪಿ ಮುಖಂಡ ಸುರಜ್ ನಾಯ್ಕ ಸೋನಿ ಭಟ್ಕಳ ಮಂಡಲ ಅಧ್ಯಕ್ಷ ರಾಜೇಶ್ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು

Related posts

Leave a Reply