Header Ads
Header Ads
Breaking News

ಭಟ್ಕಳದಲ್ಲಿ ಭೀಕರ ಅಪಘಾತ ಬೈಕ್ ಸವಾರ ಸಾವು

ಭಟ್ಕಳ ತಾಲೂಕಿನ ಜಾಲಿಕೋಡಿ ಕರಿಕಲಗೆ ಹೋಗುವ ರಸ್ತೆಯಲ್ಲಿ ಪಲ್ಸರ್ ಹಾಗೂ ಮಹೆಂದ್ರ ಜೀಪ್ ನಡುವೆ ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರ ಕರಿಕಲ್ ನಿವಾಸಿ ಅಖಿಲೇಶ್ ಮಂಜುನಾಥ ಮೋಗೇರ್ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆಭಟ್ಕಳ ತಾಲೂಕ ಕರಿಕಲ್ ನಿವಾಸಿ ಅಖಿಲೇಶ್ ಮಂಜುನಾಥ ಮೊಗೇರ್ ತನ್ನ ಸಂಬಂದಿಕರ ಮನೆಯ ಸಮಾರಂಭವನ್ನು ಮುಗಿಸಿ ಪಲ್ಸರ್ ಬೈಕ್‌ನಲ್ಲಿ ತನ್ನ ಮನೆಗೆ ತೆರಳುವ ಸಂದರ್ಭದಲ್ಲಿ ಜಾಲಿಕೋಡಿ ಕರಿಕಲಗೆ ಹೋಗುವ ರಸ್ತೆಯಲಿ ಬೈಕ್ ಮತ್ತು ಜೀಪ್ ಮಧ್ಯ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಅಖಿಲೇಶ್ ತಲೆಗೆ ಗಂಭೀರ ಗಾಯಗಳಾಗಿತ್ತು.

ಈ ಹಿನ್ನೆಲೆಯಲ್ಲಿ ತಾಲೂಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ದಾರಿಯಲ್ಲಿ ಕೊನೆಯುಸಿರೆಳೆದ ಘಟನೆ ಸಂಭವಿಸಿದೆ. ಮೃತ ಯುವಕ ನ್ಯೂ ಇಂಗ್ಲಿಷ್ ಪಿ.ಯು ಕಾಲೆಜಿನ ಪ್ರತಿಭಾವಂತ ವಿಧ್ಯಾರ್ಥಿಯಾಗಿದ್ದನ್ನು ಯುವಕನ ಸಾವಿನ ಬಗ್ಗೆ ಕಾಲೆಜಿನ ಪ್ರಾಧ್ಯಾಪಕ ವರ್ಗ ಹಾಗು ವಿದ್ಯಾರ್ಥಿ ವೃಂದದವರು ಅತೀವ ಶೋಕವನ್ನು ವ್ಯಕ್ತಪಡಿಸಿದ್ದಾರೆ ಭಟ್ಕಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply