Header Ads
Header Ads
Breaking News

ಭಟ್ಕಳದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೆದ್ಯಾನ ನಿರ್ಮಾಣ:ಆರ್.ವಿ ದೇಶಪಾಂಡೆ ಅವರಿಂದ ಉದ್ಘಾಟನೆ

ಭಟ್ಕಳ ತಾಲೂಕಿನ ಮುರ್ಡೆಶ್ವರದಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಾಣಗೊಂಡ ಸಾಲುಮರದ ತಿಮ್ಮಕ್ಕ ವೃಕ್ಷೆದ್ಯಾನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ. ದೇಶಪಾಂಡೆಯವರು ಉದ್ಘಾಟಿಸಿದರು.ಸಾಲುಮರದ ತಿಮ್ಮಕ್ಕ ವೃಕ್ಷೆದ್ಯಾನವನ್ನು ಉದ್ಘಾಟನೆ ಮಾಡಿ ಉದ್ಯಾನದ ಪ್ರಥಮ ಪ್ರವೇಶದ ರಶಿದಿಯನ್ನು ಪಡೆದುಕೊಂಡರು. ಹಾಗೆಯೇ ಪೂಜೆ ವಿಧಿ ವಿಧಾನಗಳನ್ನು ಪೂರೈಸಲಾಯಿತು. ನಂತರ ದೇಶಪಾಂಡೆಯವರು ಮಾತನಾಡಿ ಅರಣ್ಯ ಇಲಾಖೆ ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ಇಂದು ಪಾರ್ಕ ಉದ್ಗಾಟನೆಗೆ ಒತ್ತುನಿಡಿದ್ದು ನಿಜಕ್ಕೂ ಪ್ರಶಂಸನಿಯವಾಗಿದೆ ಪರಿಸರ ರಕ್ಷಣೆಯನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಕೆಲಸವನ್ನು ಮಾಡುವುದು ಕೆವಲ ಅರಣ್ಯ ಇಲಾಖೆಯ ಕೆಲಸವಲ್ಲ ಅದು ನಮ್ಮೆಲ್ಲರ ಕೆಲಸ ಆದ್ದರಿಂದ ನಾವೆಲ್ಲರು ಪರಿಸರ ರಕ್ಷಣೆ ಮಾಡಬೇಕ ಎಂದು ಹೇಳಿದರು.ಈ ಸಂದರ್ಬದಲ್ಲಿ ಶಾಸಕ ಸುನಿಲ್ ನಾಯ್ಕ ಅವರು ಮಾತನಾಡಿ ಪರಿಸರ ಇದು ನಮ್ಮ ತಾಯಿ ಇದ್ದಂತೆ ಇದನ್ನು ರಕ್ಷಣೆ ಮಾಡಬೇಕಾಗಿರುವುದು ನಮ್ಮ ನಿಮ್ಮೆಲರ ಕರ್ತವ್ಯ ನಾವು ಪ್ರಕ್ರತಿಗೆ ಎನನ್ನು ಕೊಡುತ್ತೆವೋ ನಮಗೆ ಪ್ರಕ್ರತಿ ಅದನ್ನೆ ಕೋಡುತ್ತದೆ ಇದಕ್ಕೆ ಕೊಡಗಿನಲ್ಲಿ ಆಗಿರುವ ಅನಾಹುತವೆ ಸಾಕ್ಷಿ ಆದ್ದರಿಂದ ನಾವೆಲ್ಲರು ಪ್ರಕ್ರತಿಯನ್ನು ಉಳಿಸಿ ಬೆಳಸಿ ಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ್ ತಾಲೂಕ ಪಂಚಾಯತ್ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ, ಮಾಜಿ ಶಾಸಕರಾದ ಮಂಕಾಳ ಎಸ್. ವೈದ್ಯ, ತಾಲೂಕ ಪಂಚಾಯತ್ ಉಪಾಧ್ಯಕ್ಷರಾದ ರಾಧಾ ವೈದ್ಯ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply