Header Ads
Header Ads
Header Ads
Breaking News

ಭಟ್ಕಳದಲ್ಲೊಂದು ವಿಶೇಷ ಮದುವೆ ಕನ್ನಡದ ಮಂತ್ರಘೋಷದೊಂದಿಗೆ ಸಪ್ತಪದಿ ತುಳಿದ ನವಜೋಡಿ ಕನ್ನಡಾಭಿಮಾನ ಮೆರೆದ ಪತ್ರಕರ್ತ ಅರುಣ್ ಕುಮಾರ್

ಭಟ್ಕಳ ತಾಲೂಕಿನಲ್ಲಿ ಮದುವೆ ಮನೆ ಎಂದ ಮೇಲೆ ಸಂಸ್ಕೃತ ಮಂತ್ರ ಘೋಷ ಎಲ್ಲೆಡೆ ಸರ್ವೇ ಸಾಮಾನ್ಯವಾಗಿದ್ದು, ಇಲ್ಲೊಂದು ಮದುವೆ ವಧು ವರರ ಕನ್ನಡ ಭಾಷೆ ಮೇಲಿನ ಗೌರವ ಅಭಿಮಾನದ ಸಂಕೇತದಂತೆ ಕನ್ನಡದಲ್ಲಿ ಮಂತ್ರಘೋಷದೊಂದಿಗೆ ಸಂಪ್ರದಾಯಬದ್ಧವಾಗಿ ವಿಭಿನ್ನ ರೀತಿಯಲ್ಲಿ ಕನ್ನಡದ ಮಂತ್ರ ಘೋಷದೊಂದಿಗೆ ಮದುವೆ ನಡೆದಿದೆ.

ಇತ್ತೀಚೆಗೆ ಕನ್ನಡ ಅಭಿಮಾನ ಎನ್ನುವುದು ಕೇವಲ ಪ್ರಚಾರಕ್ಕೆ ಮತ್ತು ನವೆಂಬರ್ 14 ನೇ ತಾರೀಕಿಗೆ ಮೀಸಲಾಗಿತ್ತು. ಆದರೆ ಇಲ್ಲೊಬ್ಬ ಕನ್ನಡ ಪ್ರೇಮಿ ಶಿರೂರು ಮೂಲದ ಬೈಂದೂರು ತಾಲೂಕ ಉದಯವಾಣಿ ವರದಿಗಾರ ಅರುಣ್ ಕುಮಾರ್ ಪೂಜಾರಿ ಇವರು ಭಟ್ಕಳ ತಾಲುಕಿನ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಅಚ್ಚ ಕನ್ನಡದ ಮಂತ್ರಘೋಷದೊಂದಿಗೆ ಸಂಪ್ರದಾಯಬಧ್ದವಾಗಿ ಮದುವೆ ಆಗುವುದರ ಮೂಲಕ ಪತ್ರಕರ್ತ ಅರುಣ್ ಕುಮಾರ್ ಕನ್ನಡಾಭಿಮಾನವನ್ನು ಮೆರೆದಿದ್ದಾರೆ. ತಾಲುಕಿನ ಬಂದರ್‌ನ ಬಿಂದಿಯಾ ಎನ್ನುವ ಯುವತಿಯ ಜೊತೆ ಪತ್ರಕರ್ತ ಅರುಣ್ ಕುಮಾರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಅಚ್ಚ ಕನ್ನಡದಲ್ಲಿ ಎಲ್ಲಾ ಸಂಪ್ರದಾಯದೊಂದಿಗೆ ಮದುವೆಯಾದದರು. ಕಾಸರಗೋಡು ಮೂಲದ ಹಿರೆಮಗಳೂರು ಕಣ್ಣನ್ ಅವರ ಮಕ್ಕಳು ಹಾಗೂ ಶಿಷ್ಯರ ನೇತೃತ್ವದಲ್ಲಿ ಕನ್ನಡಮಯ ಮದುವೆ ಮಂತ್ರಘೋಷದೊಂದಿಗೆ ಮದುವೆಯನ್ನು ನೆರವೆರಿಸಲಾಯಿತು. ಇವರ ಈ ಸುಂದರ ಕನ್ನಡ ಭಾಷೆಯ ಮಂತ್ರಕ್ಕೆ ಮದುವೆಗೆ ಬಂದ ಎಲ್ಲಾ ಹಿತೈಷಿಗಳು, ಸಂಬಂಧಿಕರು, ಸ್ನೇಹಿತರು ಸೇರಿದಂತೆ ಗಣ್ಯಾತಿಗಣ್ಯರು ಮೆಚ್ಚುಗೆ ಸೂಚಿಸಿದ್ದು, ವಧುವರರ ಮುಂದಿನ ಭವಿಷ್ಯ ಸುಖಕರವಾಗಿರಲಿ ಎಂದು ಶುಭಕೋರಿದರು.
ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply