Header Ads
Header Ads
Header Ads
Breaking News

ಭಟ್ಕಳದ ಅಂಗಡಿ ಮಳಿಗೆದಾರರಿಗೆ ನ್ಯಾಯ ಒದಗಿಸಿ ಅಂಗಡಿದಾರರ ಹಿತರಕ್ಷಣಾ ಸಮಿತಿಯಿಂದ ಮನವಿ

 

ಭಟ್ಕಳ ತಾಲೂಕಿನ ಪುರಸಭಾ ಅಂಗಡಿ ಮಳಿಗೆದಾರರಿಗೆ ನ್ಯಾಯ ಒದಗಿಸಿ ಕೊಡುವ ಕುರಿತು ಪುರಸಭಾ ಅಂಗಡಿದಾರರ ಹಿತರಕ್ಷಣಾ ಸಮಿತಿಯ ವತಿಯಿಂದ ಭಟ್ಕಳ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಮನವಿಯಲ್ಲಿ ಭಟ್ಕಳ ಪುರಸಭೆಯಿಂದ ಕಳೆದ ೨೦೧೬ ಅಗಷ್ಟ ೨೦ ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಾಣದ ಕೈಗಳ ಹಸ್ತಕ್ಷೇಪ ಹಾಗು ಉಡಾಫೆ ಹುಡುಗರ ಮೋಜಿನ ಆಟಕ್ಕೆ ನೈಜ ಅಂಗಡಿದಾರರು ತಮ್ಮ ಅಂಗಡಿಗಳನ್ನು ಕಳೆದುಕೊಂಡು ಬೀದಿಗೆ ಬೀಳುವ ಸಂಧರ್ಭ ಬಂದೊದಗಿದೆ. ಅಸಮಂಜಸ ಹರಾಜು ಪ್ರಕ್ರಿಯೆಯಿಂದ ಪುರಸಭೆ ಅಂಗಡಿಕಾರರು ಅನ್ಯಾಯದ ಬಗ್ಗೆ ಪ್ರಶ್ನಿಸಿ ಕೋರ್ಟನಲ್ಲಿ ದಾವೆ ಹೂಡಿದ್ದು, ದಾವೆ ವಿಚಾರಣೆಯಲ್ಲಿದೆ. ಉಚ್ಛ ನ್ಯಾಯಾಲಯದ ಮೋರೆ ಹೋಗಿ ನ್ಯಾಯ ಕೊಡಿ ಎಂದು ಕೇಳುತ್ತಿರುವಾಗ ಏಕಾ‌ಏಕಿ ನಮ್ಮನ್ನು ಜಾಗ ಖಾಲಿ ಮಾಡಿ ಕೊಡಬೇಕೆಂದು ಕೇಳಿದರೆ ಹೇಗೆ ಸಾಧ್ಯವಾಗುತ್ತದೆ. ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿ ಇರುದರಿಂದ ಅದು ಬಗೆಹರಿಯುವವರೆಗೆ ನಮಗೆ ಕಾಲಾವಕಾಶ ನೀಡಬೇಕು ಮನವಿ ಮಾಡಿಕೊಂಡರು.


ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿ ಇರುದರಿಂದ ಅದು ಬಗೆಹರಿಯುವವರೆಗೆ ನಮಗೆ ಕಾಲಾವಕಾಶ ನೀಡಬೇಕು ಎಂದು ಪುರಸಭಾ ಅಂಗಡಿ ಮಳಿಗೆದಾರರ ಹಿತರಕ್ಷಣಾ ಸಮಿತಿ ಹಾಗೂ ಅಸಮಂಜಸ ರೀತಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಂಗಡಿ ಕಳೆದುಕೊಳ್ಳುವ ಭೀತಿಯಲ್ಲಿರುವ ಅಂಗಡಿಕಾರರು ಸಹಾಯಕ ಆಯುಕ್ತರ ಮೂಲಕ ಮನವಿಯನ್ನು ಸಲ್ಲಿಸಿದರು. ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಕಚೇರಿ ಸಹಾಯಕ ಎಲ್. ಎ. ಭಟ್ಟ ಸ್ವೀಕರಿಸಿದರು. ಇದೇ ಸಂಧರ್ಭದಲ್ಲಿ ಪುರಸಭಾ ಅಂಗಡಿ ಮಳಿಗೆದಾರರ ಹಿತರಕ್ಷಣಾ ಸಮಿತಿಯವರು ಭಟ್ಕಳ ಡಿವೈ‌ಎಸ್ಪಿ, ತಹಸೀಲ್ದಾರ್ ಹಾಗೂ ಪುರಸಭಾ ಮುಖ್ಯಾಧಿಕಾರಿಗಳಿಗೆ ಮನವಿಯನ್ನು ನೀಡಿದರು. ಈ ಸಂಧರ್ಭದಲ್ಲಿ ಪುರಸಭಾ ಅಂಗಡಿ ಮಳಿಗೆದಾರರ ಹಿತರಕ್ಷಣಾ ಸಮಿತಿಯ ಮಂಜುನಾಥ ನಾಯ್ಕ, ಕೃಷ್ಣಾನಂದ ಶೇಟ್, ನಾಗೇಶ ಚಂದಾವರ, ಕೃಷ್ಣಾನಂದ ಸಾಣಿಕಟ್ಟಾ, ರಾಮಕೃಷ್ಣ ದೇವಾಡಿಗ, ವೆಂಕಟೇಶ ನಾಯ್ಕ ಸೇರಿದಂತೆ ಇನ್ನುಳಿದ ಸಂತ್ರಸ್ಥ ಅಂಗಡಿಕಾರರು ಇದ್ದರು.

ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply