Header Ads
Header Ads
Header Ads
Breaking News

ಭಟ್ಕಳದ ನಗರದಲ್ಲಿ ಕೇಂದ್ರ ರ್‍ಯಾಪಿಡ್ ಪೋರ್ಸ್‌ನಿಂದ ಫಥ ಸಂಚಲನ

 ಜಿಲ್ಲೆಯಾದ್ಯಂತ ಕಳೆದ 15 ದಿನದ ಹಿಂದೆ ಅಶಾಂತಿಯ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿಗೆ ದಕ್ಷಿಣ ಭಾರತದ ಪ್ರಮುಖ ಕೊಯಮತ್ತೂರಿನ ರ್‍ಯಾಪಿಡ್ ಪೋಲೀಸ್ ಪೋರ್ಸನ ಪಥ ಸಂಚಲನ ನಡೆಸಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಹೆಚ್ಚುವರಿ ಎಎಸ್ಪಿ ನೇತೃತ್ವದಲ್ಲಿ ತಾಲೂಕಿನ ಪೋಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಳೊಂದಿಗೆ ರ್‍ಯಾಪಿಡ್ ಪೋಲೀಸ್ ಪೋರ್ಸನ ಅಧಿಕಾರಿಗಳು, ಸಿಬ್ಬಂದಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ತಾಲೂಕಿನ ಸಂಶುದ್ದೀನ್ ಸರ್ಕಲ್‌ನಿಂದ ತೆರಳಿದ ಪಥ ಸಂಚಲನ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಮಾರಿಗುಡಿ ದೇವಸ್ಥಾನ, ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಚೌಕ ಬಜಾರ್ ಮಾರ್ಗವಾಗಿ ಸುಲ್ತಾನ್ ಸ್ಟ್ರೀಟ್, ನಗರ ಪೋಲೀಸ್ ಠಾಣೆ ಮಾರ್ಗವಾಗಿ ಪುನಃ ಸಂಶುದ್ದೀನ್ ಸರ್ಕಲ್‌ನಲ್ಲಿ ಕೊನೆಗೊಂಡಿತು.

ಈ ವಿಶೇಷ ರ್‍ಯಾಪಿಡ್ ಪೋರ್ಸಿ ತಂಡವು ಕಾರು, ಮಿಲಿಟರಿ ಮಾದರಿ ವಾಹನಗಳಲ್ಲಿ ಬಂದೂಕುಧಾರಿಗಳಾಗಿ ನಗರದ ಪ್ರಮುಖ ಸ್ಥಳಕ್ಕೆ ತೆರಳಿ ಜನರಲ್ಲಿದ್ದ ಆತಂಕ ದೂರ ಮಾಡಿ ಪೋಲೀಸ್ ಬಲಪ್ರದರ್ಶನ ಇದೆಯೆಂಬ ವಿಶ್ವಾಸ ಮೂಡಿಸಿದರು.

Related posts

Leave a Reply